ಆಸ್ಕರ್ ಪುರಸ್ಕೃತ ವಿಜಯ್ ಪ್ರಕಾಶ್ ರವರಿಗೆ ಹುಟ್ಟು ಹಬ್ಬದ ಸಂಭ್ರಮ
ಸ್ವರ ಸಾಮ್ರಾಟ ಗಾಯಕ ವಿಜಯ್ ಪ್ರಕಾಶ್ ರವರ ಹುಟ್ಟು ಹಬ್ಬದ ಪ್ರಯುಕ್ತ ಹಾಗು ವಿಜಯ್ ಪ್ರಕಾಶ್ ರವರ ಸಂಗೀತ ಪಯಣ ಕುರಿತು ಈ ಬರಹ .
ವಿಜಯ ಪ್ರಕಾಶ್ ಹುಟ್ಟಿದು ಮೈಸೂರು ಅಲ್ಲಿ ಫೆ . 21 ,1976 ರಲ್ಲಿ ತಂದೆ - ಎಲ್ .ರಾಮಶೇಷು ,ತಾಯಿ-ಆರ್ . ಲೋಪಮುದ್ರಾ . ತಮ್ಮ ಸಂಗೀತ ಪಯಣ ಪ್ರಾರಂಭ ವಾಗಿದ್ದು ತಾವು ಓದುತಿದ್ದ ಸೆಂಟ್ ಥಾಮಸ್ ಕಾನ್ವೆಂಟ್ ಶಾಲೆಯಲ್ಲಿ ಆಯೋಜಿಸಿರುವ ಕನ್ನಡ ರಾಜ್ಯೋತ್ಸವದ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಅಲ್ಲಿ ಬಹುಮಾನವಾಗಿ ಅವರು ಮೊದಲು ಪಡೆದಿದು ಒಂದು ಲೋಟ(ಗ್ಲಾಸ್ )
ಮನೆ ಬಿಟ್ಟು ಓಡಿ ಹೋಗಿದ್ದ ವಿಜಯ ಪ್ರಕಾಶ್:
ಮನೆಯಲ್ಲಿ ಯಾರಿಗೂ ಹೇಳದೆ ಕೈಯಲ್ಲಿದ್ದ ರೂ . 700 ಮತ್ತು ಒಂದು ಪ್ಯಾಂಟ್ ಶರ್ಟ್ ಬ್ಯಾಗ್ ಅಲ್ಲಿ ಹಾಕೊಂಡು ಮನೆ ಬಿಟ್ಟು ಹೊರಟರು .ಯಾಕೆ ಹೊರಟೆ ? ಎಲ್ಲಿಗೆ ಹೋಗೋದು ? ಏನು ಗೊತ್ತಿಲ್ಲ . ಮೊದಲು ಮನೆ ಬಿಟ್ಟಮೇಲೆ ಬೆಂಗಳೂರಿಗೆ ಹೋದರು . ಅಲ್ಲಿಂದ ತಿರುಪತಿಗೆ ಹೋಗಿ ದೇವರ ದರ್ಶನ ಮಾಡಿ ನೇರವಾಗಿ ಬಾಂಬೆ ಗೆ ರೈಲು ಹತ್ತಿದ್ದರು .
ಮುಂಬೈ ಗೆ ಹೋದಮೇಲೆ ಬದುಕಿನಲ್ಲಿ ಹಸಿವು ,ಕಷ್ಟ ಏನು ಅಂದು ಅರಿತರು . ಎಷ್ಟೋ ದಿನ ರೈಲು ನಿಲ್ದಾಣದ್ದಲ್ಲಿ ಮಲಗಿ ಬಾಂಬೆಯಲ್ಲಿ ಕಾಲ ಕಳೆದರು . ವಿಜಯ ಪ್ರಕಾಶ ಅವಕಾಶಕ್ಕಾಗಿ ಅಲೆದಾಡುತ್ತಿರುವಾಗ ಅವರಿಗೆ ಪರಿಚಯ ಆದವರೆ ಸುರೇಶ ವಾಡ್ಕರ್ . ವಿಜಯ ಪಾಲಿನ ಗುರುಗಳು ಆದರು ವಾಡ್ಕರ್ .
ಮೊದಲು ಧ್ವನಿ ಕೊಟ್ಟಿದು ಕೆಲ್ಲಾಗ್ಸ್ ಆಡ್ ಗಾಗಿ . ಮೊದಲು ಸಿನಿಮಾ ಹಾಡು ಹಾಡಿದ್ದು ' ಚೀನಿ ಕಮ್ '. ಅಲ್ಲಿಂದ ಪ್ರಾರಂಭವಾದ ಗಾಯನ ಇಂದುಗು ಮುಂದುವರೆದಿದೆ . ಕನ್ನಡದ್ದಲ್ಲಿ ಮೊದಲು ಹಾಡಿದ್ದು ಗಾಳಿಪಟ ಚಿತ್ರದ 'ಕವಿತೆ' ಹಾಡು . ಜೈ ಹೋ' ಹಾಡಿಗೆ ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ .
ಹೀಗೆ ಮುಂದುವರೆಯಲಿ ನಿಮ್ಮ ಸಂಗೀತ ಪಯಣ . ನಿಮಗೆ ನಮ್ಮ ಕಡೆ ಇಂದ ಹುಟ್ಟು ಹಬ್ಬದ ಶುಭಾಶಯಗಳು .
ವರದಿ :ಬಂಡಯ್ಯ ಹಿರೇಮಠ