ಕಮಲಿ ಧಾರವಾಹಿಯಲ್ಲಿ ಕಲಹ ನಿರ್ದೇಶಕನಿಂದ ವಂಚನೆ, ನಿರ್ಮಾಪಕನಿಂದ ದೂರು.

ಕಮಲಿ’ ಧಾರಾವಾಹಿ ನಿರ್ಮಾಪಕನಿಗೆ ನಿರ್ದೇಶಕರಿಂದ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು ಬೆಂಗಳೂರು ಪೊಲೀಸರಿಗೆ ದೂರು ನೀಡಲಾಗಿದೆ.

ನಿರ್ದೇಶಕ ಅರವಿಂದ್ ಕೌಶಿಕ್ 287 ಸಂಚಿಕೆ ಬಳಿಕ ತಮ್ಮನ್ನು ಕೈ ಬಿಟ್ಟಿರುವುದಾಗಿ ನಿರ್ಮಾಪಕ ರೋಹಿತ್ ಆರೋಪಿಸಿದ್ದಾರೆ. 73 ಲಕ್ಷ ಬಂಡವಾಳ ಹೂಡಿಕೆ ಮಾಡಲಾಗಿದ್ದು ಈಗ ತಮ್ಮನ್ನು ಕೈಬಿಡಲಾಗಿದೆ ಎಂದು ದೂರಿದ್ದಾರೆ.

287 ಸಂಚಿಕೆಗಳಲ್ಲಿ ನಿರ್ಮಾಪಕ ರೋಹಿತ್ ಎಂದು ಪ್ರಸಾರ ಮಾಡಿದ್ದು ಈಗ ಏಕಾಏಕಿ ಕೈಬಿಡಲಾಗಿದೆ. ತಮ್ಮ ಬಂಡವಾಳ ಮತ್ತು ಲಾಭದ ಹಣ ಕೊಡದೆ ವಂಚನೆ ಮಾಡಲಾಗಿದೆ ಎಂದು ದೂರಿದ್ದು, ಧಾರಾವಾಹಿ ಪ್ರಸಾರವಾಗುವ ವಾಹಿನಿಗೂ ಕೂಡ ಮಾಹಿತಿ ನೀಡಲಾಗಿದೆ. ಆದರೆ ವಾಹಿನಿಯ ನಿರ್ದೇಶಕ ಸ್ಪಂದಿಸಿಲ್ಲ ಎಂದು ಆರೋಪಿಸಲಾಗಿದ್ದು, ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ಹೇಳಲಾಗಿದೆ.