ಎಣ್ಣೆ ಬಿಡು ಅಂದಿದ್ದಕ್ಕೆ ಜೀವನೇ ಬಿಟ್ಟ ಯುವಕ

ಸಾರಾಯಿ ಕುಡಿತ ಬಿಡು ಅಂತ ಮನೆಯವರು ಬುದ್ದಿ ಹೇಳೋದು ಸಹಜ .ಕುಡಿತ ಬಿಟ್ಟರೆ ಆರೋಗ್ಯಕ್ಕೂ ಒಳ್ಳೇದು .  ಈ ತರಹ ಮನೆಯಲ್ಲಿ ತಾಯಿ ಮತ್ತು ಸಹೋದರ ಬುದ್ದಿ ಹೇಳಿದ್ದಕ್ಕೆ ಯುವಕನೋರ್ವ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಆತ್ಮಹತ್ತೆ ಮಾಡಿಕೊಂಡಿರುವ ಘಟನೆ ಬುಧವಾರ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕು ಮಹಾಲಿಂಗಪುರದಲ್ಲಿ ನಡದಿದೆ . 


ಸಚಿನ್ ಹನುಮಂತ ರೊಳ್ಳಿ (23 ) ಆತ್ಮಹತ್ತೆ ಮಾಡಿಕೊಂಡಿರುವ ಯುವಕ . ಸ್ಥಳೀಯ ಜೋಡು ರಸ್ತೆಯ ಶಾಂತಕುಮಾರ ಮಣ್ಣಯ್ಯ ಮಠ ಅವರ ಅಂಗಡಿಯ ಮಳಗಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ತೆ  ಮಾಡಿಕೊಂಡಿದ್ದಾನೆ . 

ಈ ಕುರಿತು ಮೃತನ ಸಹೋದರ ಚೇತನ ರೊಳ್ಳಿ ಮಹಾಲಿಂಗಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು,ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ . 

ವರದಿ :ಬಂಡಯ್ಯ ಹಿರೇಮಠ