ಕಿರಿಯ ಪರಿಸರವಾದಿಗೆ ಮೂರು ದಿನಗಳ ಸೆರೆಮನೆಯೇ ವಾಸ
ಟೂಲ್ ಕಿಟ್ ಕೇಸ್ ನ ಪ್ರಮುಖ ಆರೋಪಿಯಾದ ದಿಶಾ ರವಿ ಗೆ ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ, ದೆಹಲಿ ಕೋರ್ಟ್ ೧೯ ನೇ ತಾರೀಖು ಶುಕ್ರವಾರದಂದು ಕರೆ ನೀಡಿದೆ. ಪಟಿಯಾಲಾ ಕೋರ್ಟ್ ಗೆ ಹಾಜರ್ ಪಡಿಸುವ ಮುನ್ನ ,ಟೂಲ್ ಕಿಟ್ ವಿಷಯದ ಬಗ್ಗೆ ಬಾಯಿ ಬಿಡಿಸಬೇಕೆನ್ನುವ ಸಲುವಾಗಿ ದೆಹಲಿ ಪೊಲೀಸರು ನ್ಯಾಯಾಂಗ ಬಂಧನದ ನಿರ್ಣಯವನ್ನು ತೆಗೆದುಕೊಂಡಿದ್ದು, ಆರೋಪಿಯ ಸಹಚರರು ಸಹ ಪ್ರಕರಣದಲ್ಲಿ ಶ್ಯಾಮೀಲಾಗಿರುವ ಕಾರಣದಿಂದಾಗಿ, ಕೇಸ್ ನಲ್ಲಿ ಇವರ ಕೈವಾಡ ಏನಿದೆ? ಎನ್ನುವುದರ ಕುರಿತು ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ.
ಸರಿಯಾಗಿ ಉತ್ತರ ನೀಡುತ್ತಿಲ್ಲ
ದಿಶಾ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ, ವಿಚಾರಣೆ ನಡೆಸಿದಾಗ ಸರಿಯಾಗಿ ಉತ್ತರ ನೀಡುತ್ತಿಲ್ಲ. ಕೇಸ್ ನ ಎಲ್ಲಾ ಅಪರಾಧಗಳನ್ನ ಆರೋಪಿಗಳಾದ ನಿಕಿತಾ ಮತ್ತು ಶಂತಾನು ಮೇಲೆ ಹಾಕುತ್ತಿದ್ದಾಳೆ ಎಂದು ಪಬ್ಲಿಕ್ ಪ್ರೊಸೆಕ್ಯೂಟರ್ ಕೋರ್ಟ್ ಗೆ ತಿಳಿಸಿದ್ದಾರೆ. ಫೆಬ್ರವರಿ 22 ರಂದು ಶಂತಾನು ಹಾಜರಾಗುವ ಸಾಧ್ಯತೆಗಳಿವೆ, ಆದ್ದರಿಂದ ದಿಶಾ ರವಿ ನ ಪೊಲೀಸರು 3 ದಿನಗಳ ಕಾಲ ವಶಪಡಿಸಿಕೊಳ್ಳಬೇಕೆಂದು ಪಬ್ಲಿಕ್ ಪ್ರೊಸೆಕ್ಯೂಟರ್ ವಾದವನ್ನು ಮಂಡಿಸಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಟೂಲ್ ಕಿಟ್ ನ ಹಂಚಿದ್ದಾಳೆ
ರೈತರ ಪ್ರತಿಭಟನೆಯ ಸಂದರ್ಭದಲ್ಲಿ, ನಿಕಿತಾ ಜಾಕೋಬ್, ಶಂತಾನು, ದಿಶಾ ಸೇರಿಕೊಂಡು ಟೂಲ್ ಕಿಟ್ ನ ತಯಾರಿಸಿದ್ದು, ದಿಶಾ ರವಿ ಸಾಮಾಜಿಕ ಜಾಲ ತಾಣಗಳಲ್ಲಿ ಟೂಲ್ ಕಿಟ್ ನ ಹಂಚಿದ್ದಾಳೆ, ನಂತರ ಇದನ್ನು ಟೆಲಿಗ್ರಾಂ ಮೂಲಕ ಹವಾಮಾನ ಕಾರ್ಯಕರ್ತೆ ಗ್ರೇಟಾ ಠಣ್ ಬುರ್ಗ್ ಗೆ ಕಳುಹಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಸ್ ನ ಗುಟ್ಟು ರಟ್ಟಾಗಬಾರದು: ದಿಶಾ
ಈ ಕೇಸ್ ಗೆ ಸಂಬಂಧ ಪಟ್ಟ ಹಾಗೆ, ಪೊಲೀಸರು ಅನಾವಶ್ಯಕವಾಗಿ ಪ್ರೆಸ್ ಮೀಟ್ ಮಾಡುವಂತಿಲ್ಲ, ಮಾಧ್ಯಮಗಳಿಗೆ ಕೇಸ್ ನ ಮಾಹಿತಿ ನೀಡುವಂತಿಲ್ಲ. ನ್ಯೂಸ್ ಚಾನೆಲ್ ನವರು ನ್ಯೂಸ್ ನ ಪ್ರಸಾರ ಮಾಡುವ ಮುಂಚೆ, ಮೂಲಗಳಿಂದ ಬಂದ ಮಾಹಿತಿ ಸರಿಯಾಗಿದೆಯಾ? ಅಂತ ಪರಿಶೀಲಿಸಬೇಕು. ಇನ್ನು ಜರ್ನಲಿಸ್ಟ್ ಸಹ ತಮಗೆ ಸಿಕ್ಕ ಮಾಹಿತಿಯ ಮೂಲವನ್ನ ಹೇಳುವಂತಿಲ್ಲ ಎಂದು ಕೋರ್ಟ್ ಮಾಧ್ಯಮದವರಿಗೆ ತಿಳಿಸಿದೆ. ಪ್ರಕರಣಕ್ಕೂ ಹಾಗೂ ಎಫೈರ್ ನ ನಡುವೆ ಇರುವ ನಂಟನ್ನು ಮಾಧ್ಯಮದವರಿಗೆ ಬಿಟ್ಟು ಕೊಡಬಾರದೆನ್ನುವ ವಿಷಯವನ್ನು ದಿಶಾ ಕೋರ್ಟ್ ಗೆ ಪ್ರಸ್ತಾಪಿಸಿದ್ದಳು.
ಬರಹ: ಶ್ರೀ ಹರ್ಷ