ಬಾಲಕಿ ಪಾರಾಗಲು ಕಾರಣವಾಯ್ತು ಆ ಸಂದೇಶ
ಅಪಹರಣಕ್ಕೆ ಒಳಗಾಗಿದ್ದ 14 ವರ್ಷದ ಬಾಲಕಿಯೊಬ್ಬಳು ತನ್ನ ಮೊಬೈಲ್ ನಲ್ಲಿ ಸ್ನ್ಯಾಪ್ ಚಾಟ್ ಮಾಡುವ ಮುಖೇನ ಆಪತ್ತಿನಿಂದ ಪಾರಾಗಿರುವ ಘಟನೆ ನಡೆದಿದೆ.
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಘಟನೆ ಕುರಿತು ಪೊಲೀಸರು ನೀಡಿರುವ ಮಾಹಿತಿಯಂತೆ, 14 ವರ್ಷದ ಬಾಲಕಿ 55 ವರ್ಷದ ಅಲ್ಬರ್ಟ್ ಥಾಮಸ್ ವೆಸ್ಕೆಜ್ ಎಂಬಾತನನ್ನು ಭೇಟಿಯಾಗಿದ್ದಾಳೆ.
ಆತ ಈಕೆಗೆ ಮಾದಕ ವಸ್ತು ನೀಡಿ ಪ್ರಜ್ಞೆ ತಪ್ಪುವಂತೆ ಮಾಡಿದ್ದಾನೆ, ಬಳಿಕ ತನ್ನ ಸ್ನೇಹಿತರಾದ 34 ವರ್ಷದ ಆಂಟೊನಿಯೊ ಮತ್ತು 31 ವರ್ಷದ ಹೆಡಿಬರ್ಟೊ ಅವರೆಂಗಾ ಅವರನ್ನು ಕರೆಸಿ ಮೂವರೂ ಸೇರಿ ಕಾರಿನಲ್ಲಿ ಬಾಲಕಿಯನ್ನು ಸ್ಯಾನ್ ಜೀಸ್ ನ ಹೋಟೆಲ್ ಗೆ ಕರೆತಂದು ಎರಡನೇ ಮಹಡಿಯ ರೂಂನಲ್ಲಿ ಇರಿಸಿದ್ದಾರೆ.
ಆರೋಪಿ ವೆಸ್ಕಜೆ ಬಾಲಕಿ ಮೇಲೆ ಸತತವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಸಂದರ್ಭದಲ್ಲಿ ಜಾಗೃತಳಾದ ಬಾಲಕಿ ತನ್ನ ಮೊಬೈಲ್ ಮೂಲಕ ಸ್ನ್ಯಾಪ್ ಚಾಟ್ ಮಾಡಿ ತನ್ನ ಗೆಳೆಯರಿಗೆ ತನ್ನ ಸ್ಥಿತಿಯನ್ನು ವಿವರಿಸಿದ್ಧಾಳೆ. ಆದರೆ ಇರಿಸಿದ ಸ್ಥಳದ ಮಾಹಿತಿಯ ಅರಿವಿರಲಿಲ್ಲ. ಆದರೆ ಗೆಳತಿಯರು ಕೂಡಲೇ 911 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿದರು. ಸುಳಿರಿತ ವೆಸ್ಕಜೆ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಉಳಿದಿಬ್ಬರು ಸಿಕ್ಕಿಬಿದ್ದಿದ್ದು ಅಪಹರಣ ಮತ್ತು ಕಿರುಕುಳ ಆರೋಪದ ಮೇಲೆ ಬಂಧಿಸಲಾಗಿದೆ.