ಟೀಮ್ ಇಂಡಿಯಾಕ್ಕೆ ಕಿವೀಸ್‌ ನೆಲದಲ್ಲಿ ಇತಿಹಾಸ ಬರೆಯಲು ಇನ್ನೊಂದು ಮೆಟ್ಟಿಲು ಬಾಕಿ. ಕಿವೀಸ್ ಗೆ ಮಾಡು ಇಲ್ಲವೇ ಮಡಿ ಪಂದ್ಯ

ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವನ  ಮೂರನೇ ಪಂದ್ಯ ಇಂದು ನಡೆಯಲಿದ್ದು.  ಈ ಒಂದು ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಇತ್ತ ಅತಿಥೇಯರು ತಂಡ ನ್ಯೂಜಿಲ್ಯಾಂಡ್‌ಗೆ ಇಂದಿನ ಪಂದ್ಯ ಡು ಆರ್ ಡೈ ಪಂದ್ಯವಾಗಿತ್ತು ಗೆದ್ದರಷ್ಟೇ ಸರಣಿಯಲ್ಲಿ ಉಳಿಗಾಲ.


ಮೊದಲ ಎರಡು ಪಂದ್ಯಗಳು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದಿತ್ತು ಈ ಎರಡು ಪಂದ್ಯಗಳನ್ನು ಕೊಹ್ಲಿ ಹುಡುಗರು ಭರ್ಜರಿ ಗೆಲುವು ಸಾಧಿಸಿದ್ದರು.ಮೊದಲ ಬಾರಿಗೆ ಟೀಮ್ ಇಂಡಿಯಾಗೆ  ಕಿವೀಸ್ ನೆಲದಲ್ಲಿ ಇತಿಹಾಸ ನಿರ್ಮಾಣ ಮಾಡಲು ಇನ್ನೊಂದು ಮೆಟ್ಟಿಲು ಬಾಕಿ ಈಗಾಗಲೇ ಸರಣಿಯಲ್ಲಿ 2-0 ಅಂತರದಲ್ಲಿ 5 ಟಿ-20 ಪಂದ್ಯಗಳಲ್ಲಿ ಮುನ್ನಡೆಯಲ್ಲಿದೆ. ಬ್ಲೂ ಬಾಯ್ಸ್ ಭರ್ಜರಿ ಫಾರ್ಮ್ನಲ್ಲಿದ್ದಾರೆ , ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಈ ಒಂದು ಪಂದ್ಯವನ್ನು ಗೆಲ್ಲಲು ಸಕಲ ತಯಾರಿಯನ್ನು ಟೀಮ್ ಇಂಡಿಯಾ ನಡೆಸಿದೆ.

 ಪ್ರವಾಸಿ ತಂಡ ಭಾರತಕ್ಕೆ  ಟಕ್ಕರ್ ನೀಡಲು ವಿಲಿಯಮ್ಸ್ ಪಡೆ ಸಜ್ಜಾಗಿದೆ. ಮೇಲ್ನೋಟಕ್ಕೆ ಬ್ಯಾಟಿಂಗ್ ವಿಭಾಗ ಉತ್ತಮವಾಗಿದ್ದು. ಕಾಲಿನ್ ಮನ್ರೋ ಹಾಗೂ ಮಾರ್ಟಿನ್ ಗುಪ್ತಿಲ್ ಹಾಗೂ ನಾಯಕ ಕೇನ್ ವಿಲಿಯಮ್ಸ್ ಅನುಭವಿ ಆಟಗಾರ ರಾಸ್ ಟೈಲರ್ ಪುಟಿದೇಳುವ ನಿರೀಕ್ಷೆ ಇದೆ. ಬೌಲರ್ ಟೀಮ್ ಸೌಥಿ ಬೌಲಿಂಗ್ ವಿಭಾಗ ಜವಾಬ್ದಾರಿ ನಿರ್ವಹಿಸಬೇಕು.