2020 ರಲ್ಲಿ 12 ಕರ್ನಾಟಕ ಐಪಿಎಸ್ ಅಧಿಕಾರಿಗಳ ನಿವೃತ್ತಿ....

 

ಬೆಂಗಳೂರು, ಜನವರಿ 03 : ಕರ್ನಾಟಕದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ 12 ಐಪಿಎಸ್ ಅಧಿಕಾರಿಗಳು 2020ರಲ್ಲಿ ನಿವೃತ್ತರಾಗಲಿದ್ದಾರೆ. ಡಿಜಿ & ಐಜಿಪಿಯಾಗಿರುವ ನೀಲಮಣಿ ಎನ್. ರಾಜು ಅವರು ಸಹ ಜನವರಿ 31ಕ್ಕೆ ನಿವೃತ್ತರಾಗಲಿದ್ದಾರೆ

 

2020ರ ವಿವಿಧ ತಿಂಗಳಿನಲ್ಲಿ ರಾಜ್ಯದ 12 ಐಪಿಎಸ್ ಅಧಿಕಾರಿಗಳು ನಿವೃತ್ತರಾಗಲಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ನಿವೃತ್ತರಾಗಲಿದ್ದು, ಹೊಸ ಡಿಜಿ & ಐಜಿಪಿ ಆಯ್ಕೆಗೆ ಈಗಾಗಲೇ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ.

ಕರ್ನಾಟಕ ಸರ್ಕಾರ ಕೇಂದ್ರ ಲೋಕಸಭಾ ಆಯೋಗಕ್ಕೆ ಮೂವರು ಐಪಿಎಸ್ ಅಧಿಕಾರಿಗಳ ಹೆಸರು ಶಿಫಾರಸು ಮಾಡಿದೆ.ಸೇವಾ ಹಿರಿತನದ ಆಧಾರದ ಮೇಲೆ ಹೊಸ ಡಿಜಿ & ಐಜಿಪಿ ನೇಮಕಾತಿ ನಡೆಯಲಿದ್ದು, ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಸ್ಥಾನಕ್ಕೆ ಯಾರ ನೇಮಕವಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ. ಎಂ. ಪ್ರಸಾದ್, ಸಿಐಡಿಯ ಡಿಜಿಪಿ ಪ್ರವೀಣ್ ಸೂದ್ ಮತ್ತು ರಾಜ್ಯ ಪೊಲೀಸ್ ತರಬೇತಿ ವಿಭಾಗದ ಡಿಸಿಪಿ ಪದಮ್ ಕುಮಾರ್ಗರ್ಗ್ ಹೆಸರನ್ನು ಡಿಜಿ & ಐಜಿಪಿ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ.