ವಾಹನ ಸವಾರರಿಗೆ ಸಿಹಿಸುದ್ದಿ .....!

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ನಡೆಸುವ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಟೋಲ್ ಕಟ್ಟಲು ಸಾಲಿನಲ್ಲಿ ಕಾಯುವ ಬದಲು ಫಾಸ್ಟ್ಯಾಗ್ ಬಳಕೆ ಮಾಡಬಹುದಾಗಿದೆ.

ಟೋಲ್ ಬೂತ್‌ಗಳಲ್ಲಿರುವ ಫಾಸ್ಟ್ ಟ್ಯಾಗ್    ಸ್ಕ್ಯಾನರ್ ಹಾಳಾಗಿದ್ದರೆ ವಾಹನ ಸವಾರರು ಟೋಲ್ ಪಾವತಿ ಮಾಡದೆ ಉಚಿತವಾಗಿ ಸಂಚಾರ ನಡೆಸಬಹುದಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕುರಿತು ಮಾಹಿತಿ ನೀಡಿದೆ.

 ಫಾಸ್ಟ್ ಟ್ಯಾಗ್  ಹೊಂದಿರುವ ವಾಹನವು ಟೋಲ್ ಪ್ಲಾಜಾ ಮೂಲಕ ಸಂಚಾರ ನಡೆಸುವಾಗ    ಫಾಸ್ಟ್ ಟ್ಯಾಗ್  ಸ್ಕ್ಯಾನರ್ ಕೆಟ್ಟಿದ್ದರೆ ಅಥವ ಅಲ್ಲಿ ಸ್ಕ್ಯಾನರ್ ಇಲ್ಲವಾದಲ್ಲಿ ಟೋಲ್‌ಗಳ ಮೂಲಕ ಜನರು ಉಚಿತವಾಗಿ ಸಂಚಾರ ನಡೆಸಬಹುದು.

 

ಫಾಸ್ಟ್ ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ವಾಹನ ಸವಾರರಿಗೆ 'ಶೂನ್ಯ ವಹಿವಾಟು ರಶೀದಿ'ಯನ್ನು ನೀಡಲಾಗುತ್ತದೆ. ಆದರೆ, ವಾಹನ ಸವಾರರು ಯಾವುದೇ ಶುಲ್ಕವನ್ನು ಪಾವತಿ ಮಾಡುವುದು ಬೇಡ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.

 

ದೇಶಾದ್ಯಂತ ಡಿಸೆಂಬರ್ 1ರಿಂದ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿತ್ತು. ಬಳಿಕ ಇದನ್ನು ವಿಸ್ತರಣೆ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಜನವರಿ 15ರಿಂದ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ.

 

ಹಲವು ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಬೂತ್‌ನಲ್ಲಿ ಫಾಸ್ಟ್ಯಾಗ್ ವಾಹನಗಳಿಗೆ ಪ್ರತ್ಯೇಕ ಪಥವನ್ನು ನಿರ್ಮಾಣ ಮಾಡಲಾಗುತ್ತಿದೆ. ಹಲವು ವಾಹನಗಳು ಫಾಸ್ಟ್ಯಾಗ್ ಅಳವಡಿಸಿಕೊಂಡಿದ್ದು, ಡಿಸೆಂಬರ್‌ನಲ್ಲಿ 6.4 ಕೋಟಿ ಫಾಸ್ಟ್ಯಾಗ್ ವಹಿವಾಟು ನಡೆದಿದ್ದು, 1256 ಕೋಟಿ ಟೋಲ್ ಸಂಗ್ರಹವಾಗಿದೆ.