ಮಲ್ಲಿಕಾರ್ಜುನ್ ಖರ್ಗೆಗೆ ಕಾಂಗ್ರೆಸ್ ರಾಜ್ಯಸಭೆ ಟಿಕೆಟ್...ಜೆಡಿಎಸ್ ನಿಂದ ದೇವೇಗೌಡರು ಕಣಕ್ಕೆ...

ಕರ್ನಾಟಕದಿಂದ ತೆರವಾಗುತ್ತಿರುವ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ ಜೂನ್ 19 ರಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಹಿನ್ನಲೆ ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ.

 ಕಾಂಗ್ರೆಸ್ ನಿಂದ ತೆರವಾಗಿರುವ ಒಂದು ಸ್ಥಾನಕ್ಕೆ ಮಲ್ಲಿಕಾರ್ಜುನ್ ಖರ್ಗೆಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಮಲ್ಲಿಕಾರ್ಜುನ್ ಖರ್ಗೇಯನ್ನು ಸೋನಿಯಾ ಗಾಂಧಿ ಆದೇಶದ ಮೇರೆಗೆ ರಾಜ್ಯಸಭಾ ಅಭ್ಯರ್ಥಿಯಾಗಿ ಘೋಷಿಸಲಾಗಿದೆ ಎಂದು ಕಾಂಗ್ರೇಸ್ ಪಕ್ಷ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನು ಜೆಡಿಎಸ್ ಪಕ್ಷದ ಜೆಪಿ ಭವನದಲ್ಲಿ ಶಾಸಾಕಂಗ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯಸಭೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಎಚ್.ಡಿ ದೇವೇಗೌಡರನ್ನು ಅಯ್ಕೆ ಮಾಡಲಾಯಿತು. ರಾಜ್ಯಸಭೆಗೆ ಆಯ್ಕೆಯಾಗಲು ಬೇಕಾಗುವಷ್ಟು ಶಾಸಕರ ಬೆಂಬಲ ಜೆಡಿಎಸ್ ಪಕ್ಷಕಿಲ್ಲ.ಒಂದು ವೇಳೆ ಕಾಂಗ್ರೆಸ್ ನಲ್ಲಿ ಹೆಚ್ಚುವರಿಯಾಗುವ ಮತಗಳನ್ನು ಜೆಡಿಎಸ್ ಗೆ ನೀಡಿದರೆ ಜೆಡಿಎಸ್ ರಾಜ್ಯಸಭೆ ಚುನಾವಣೆಯನ್ನು ಗೆಲ್ಲಬಹುದು. ಆದರೆ ಈ ನಡುವೆ ಎಲ್ಲಿ ಜೆಡಿಎಸ್ ಶಾಸಕರೇ ಅಡ್ಡ ಮತದಾನ ಮಾಡುವ ಭಯವೂ ಜೆಡಿಎಸ್ ನಾಯಕರಿಗಿದೆ.