ಪೌರತ್ವ ಕಾಯ್ದೆ ವಿರುದ್ಧ ಒಗ್ಗಟ್ಟಾಗಿ: 11 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಕೇರಳ ಸಿಎಂ.
ಕೇರಳ : ಪೌರತ್ವ ಕಾಯ್ದೆಯನ್ನು ಮೊದಲಿನಿಂದಲೂ ವೀರೊಧಿಸಿಕೊಂಡು ಬಂದ ರಾಜ್ಯಗಳಲ್ಲಿ ಕೇರಳವು ಒಂದು. ಪೌರತ್ವ ಕಾಯ್ದೆ ಜಾರಿಯಾದ ದಿನದಿಂದಲೂ ಕೇರಳ ಸಿಎಂ ಪಿಣರಾಯಿ ವೀಜಯನ್ ವಿರೋಧಿಸುತ್ತಲೇ ಬಂದಿದ್ದು ಈಗ ಬಿಜೆಪಿಯೇತರ ಸರ್ಕಾರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕಾಯ್ದೆಯ ವಿರುದ್ಧ ಒಟ್ಟಾಗುವಂತೆ ಮನವಿ ಮಾಡಿದ್ದರೆ.
ಮಹಾರಾಷ್ಟ್ರ , ಪಶ್ಚಿಮ ಬಂಗಾಳ ಸೇರಿದಂತೆ 11 ಬಿಜೆಪಿಯೇತರ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿರುವ ಪಿಣರಾಯಿ ವೀಜಯನ್, ಪತ್ರದಲ್ಲಿ
"ವಿವಿಧತೆಯಲ್ಲಿ ಏಕತೆಯಿದೆ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಹಿಂದಿನಿಂದಲೂ ಅದು ಉಳಿದುಕೊಂಡು ಬಂದಿದೆ. ದೇಶದ ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಸಮಾಜದ ಎಲ್ಲಾ ವರ್ಗದ ಜನರು ಒಗ್ಗೂಡಬೇಕು" ಎಂದು ಬರೆದಿದ್ದಾರೆ.
ಇನ್ನು ಕಳೆದ ಕೆಲವು ದಿನಗಳಿಂದ ಪೌರತ್ವ ಕಾಯ್ದೆ ವಿರೋಧಿಸಿ ವಿಪಕ್ಷಗಳು, ವಿಧ್ಯಾರ್ಥಿ ಸಂಘಟನೆಗಳು ಸೇರಿದಂತೆ ಸಾವಿರಾರು ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು , ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸಾಕಷ್ಟು ಸಾವು , ನೋವು ಸಂಭವಿಸಿತ್ತು.ಆದರೆ ಇಷ್ಟೆಲ್ಲಾ ಪ್ರತಿಭಟನೆಯ ನಡುವೆಯೂ
ವಿಚಲಿತಗೊಳ್ಳದೆ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲಾ ಎಂದು ಖಡಕ್ ಆಗಿ ಹೇಳಿದೆ.