ಕಿಂಗ್‌ ಕೊಹ್ಲಿ ಖರೀದಿಸಿದ ಕಾರಿನ ಬೆಲೆಯೆಷ್ಟು ಗೊತ್ತಾ?

ಮುಂಬೈ: ಟೀಮ್‌ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ 2ನೇ ಹಣಹಣಿಗೂ ಮುನ್ನ ತಮಗೆ ತಾವೇ ಐಶಾರಾಮಿ ಉಡುಗೊರೆಯೊಂದನ್ನು ನೀಡಿದ್ದಾರೆ.ಮುಂಬೈನಲ್ಲಿ ಗುರುವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಜರ್ಮನಿ ಮೂಲದ ಐಶಾರಾಮಿ ಕಾರು ತಯಾರಿಕಾ ಸಂಸ್ಥೆ 'ಆಡಿ'ಯ ನೂತನ ಮಾಡಲ್‌ 'ಆಡಿ ಕ್ಯೂ8 ಕ್ರಾಸ್‌ಓವರ್‌ ಎಸ್‌ಯುವಿ' ಬಿಡುಗಡೆ ಮಾಡಿದರು. ಅಷ್ಟೇ ಅಲ್ಲದೆ ಭಾರತದಲ್ಲಿ ಈ ಐಶಾರಾಮಿ ಕಾರನ್ನು ಖರೀದಿಸಿದ ಮೊತ್ತ ಮೊದಲ ಗ್ರಾಹಕ ಎನಿಸಿಕೊಂಡಿದ್ದಾರೆ ಕೂಡ.ಬರೋಬ್ಬರಿ 1.33 ಕೋಟಿ ರೂ. (ಎಕ್ಸ್‌ ಶೋರೂಮ್‌ ದರ) ಬೆಲೆಯ ಆಡಿ ಕ್ಯೂ8 ಎಸ್‌ಯುವಿ ಕಾರನ್ನು ತಮ್ಮ ಗ್ಯಾರೇಜ್‌ಗೆ ಸೇರಿಸಿಕೊಂಡಿದ್ದಾರೆ.3.0 ಲೀಟರ್‌ ಟಿಎಫ್‌ಎಸ್‌ಐ ಪೆಟ್ರೋಲ್‌ ಇಂಜಿನ್‌ ಹೊಂದಿರುವ ಆಡಿ ಕ್ಯೂ8 ಎಸ್‌ಯುವಿ ಕಾರು ಗರಿಷ್ಠ 340 ಹಾರ್ಸ್‌ಪವರ್‌ ನೀಡುವ ಸಾಮರ್ಥ್ಯ ಹೊಂದಿದೆ. ಈ ಹೊಸ ಕಾರಿನಲ್ಲಿ ಎಲ್ಲಿಗೆ ಹೋಗುವಿರಿ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, "ಸಮಯ ಸಿಕ್ಕಾಗ ಅನುಷ್ಕಾ (ಪತ್ನಿ) ಜೊತೆಗೆ ಮುಂಬೈನ ಸೀ ಲಿಂಕ್‌ನಲ್ಲಿ ಒಂದು ಸುತ್ತು ಬರುವೆ," ಎಂದು ಹೇಳಿದ್ದಾರೆ.ವಿರಾಟ್‌ ಕೊಹ್ಲಿ ಖರೀದಿಸಿದ ಹೊಸ ಕಾರಿನ ಕೆಲ ಪ್ರಮುಖ ಫೀಚರ್‌ಗಳು ಈ ಕೆಳಗಿನಂತಿವೆ.