ಸಿಎಎ ಸಾಂವಿಧಾನಿಕ ಮಾಡುವ ಕುರಿತು ಅಚ್ಚರಿ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ...

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಸಾಂವಿಧಾನಿಕ ಎಂದು ಘೋಷಿಸಿ ಎಲ್ಲ ರಾಜ್ಯಗಳೂ ಜಾರಿಗೆ ತರುವಂತೆ ಆದೇಶಿಸಬೇಕೆಂದು ಕೋರಿ
ಅಡ್ವೊಕೇಟ್ ವಿನೀತ್ ದಂಡ ಎಂಬುವವರು ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಪೌರತ್ವ ತಿದ್ದಪಡಿ ಕಾಯ್ದೆಯನ್ನು ಸಂವಿಧಾನಿಕಗೊಳಿಸಿ ಎಂಬ ಅರ್ಜಗೆ ಅಚ್ಚರಿ ವ್ಯಕ್ತಪಡಿಸಿರುವ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ, ಕಾಯ್ದೆಯನ್ನು ಸಂವಿಧಾನಿಕವಾಗಿ ಘೋಷಿಸಿ ಅಂತ ಮೊದಲ ಬಾರಿಗೆ ಕೋರ್ಟ್ ನಲ್ಲಿ ಒಬ್ಬರು ಕೇಳುತ್ತಿದ್ದಾರೆ ಎಂದು ಹೇಳಿದೆ.

ಕಾನೂನಿನ ಸಿಂಧುತ್ವವನ್ನು ನಿರ್ಧರಿಸುವುದು ಕೋರ್ಟ್ ನ ಕೆಲಸವಾಗಿದೆ. ಆದರೆ ಕಾಯ್ದೆಯನ್ನು ಸಾಂವಿಧಾನಿಕ ಎಂದು ಘೋಷಿಸುವುದು ಕೋರ್ಟ್ ನ ಕೆಲಸವಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವೈ ಹಾಗೂ ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠವೂ ಹೇಳಿತು.

ದೇಶದಲ್ಲಿ ಸದ್ಯ ಹಿಂಸಾಚಾರ ನಡೆಯುತ್ತಿದ್ದು, ಇದೆಲ್ಲ ನಿಂತ ಬಳಿಕವಷ್ಟೇ ಈ ಅರ್ಜಿಯನ್ನು ವಿಚಾರಣೆ ನಡೆಸಬಹುದಾಗಿದೆ ಎಂದು ಕೋರ್ಟ್ ತನ್ನ ಅಂತಿಮ ಅಭಿಪ್ರಾಯವನ್ನು ತಿಳಿಸಿದೆ.