ಕಿಚ್ಚ ಹೇಳಿದ ಸಿನಿ ಪಯಣದ ಕಥೆ....
ಕರ್ನಾಟಕದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 24 ವರ್ಷಗಳು ಸಂದಿದ್ದು,
ಇಂದಿಗೆ 25 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.ಈ ಸಂಧರ್ಭದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ತಮ್ಮ 24 ವರ್ಷಗಳ ಸಿನಿ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದಾರೆ.
ಮೌನದಿಂದ ಆರಂಭವಾದ ಪಯಣ......
24 ವರ್ಷಗಳ ಹಿಂದೆ ಚಿತ್ರ ಮಂದಿರಕ್ಕೆ ಪ್ರೇಕ್ಷಕರು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾನು ಯಾವುದೋ ಒಂದು ಮೂಲೆಯಲ್ಲಿ ಕುಳಿತು ಕಾಯುತ್ತಿದ್ದೆ.
ನನ್ನನ್ನು ಬೆಳ್ಳಿ ಪರದೆ ಮೇಲೆ ನೋಡಿ ಖುಷಿಪಡತಾರೆ ಅಂದ್ಕೊಡಿದ್ದೆ. ನನ್ನ ಪಾತ್ರವನ್ನು ನೋಡಿ ಚಪ್ಪಾಳೆ ತಟ್ಟುತ್ತಾರೆ ಅಂದ್ಕೊಡಿದ್ದೆ.ಆದರೆ ಅದು ಯಾವುದು ನಡೆಯಲಿಲ್ಲ. ಜನ ನನ್ನ ಪಾತ್ರವನ್ನು ನೋಡಿ ಮೆಚ್ಚುವುದಿರಲಿ ಚಿತ್ರಮಂದಿರಕ್ಕೆ ಬರಲಿಲ್ಲ,ಚಿತ್ರಮಂದಿರದಲ್ಲಿ ಶಿಳ್ಳೆ ಇಲ್ಲ, ಚಪ್ಪಾಳೆ ಇಲ್ಲ,ನಗು ಇಲ್ಲ,ಜೈಕಾರ ಇಲ್ಲ ಬರಿ ಮೌನ,ನೀರವ ಮೌನ ಒಳಗೂ-ಹೊರಗೂ.
ಆ ಮೌನದಿಂದ ಪ್ರಾರಂಭವಾದ ಆ ಪಯಣ ಇವತ್ತಿಗೆ 25ನೇ ವರ್ಷ. ಇಂದು ಚಿತ್ರಮಂದಿರದ ಕಡೆ ಒಮ್ಮೆ ನೋಡಿದಾಗ,ಪರದೆ ಕಟ್ಟೆ ಏರಿ ಕುಣಿಯುವುದನ್ನು ನೋಡಿದಾಗ ನನಗನ್ನಿಸುತ್ತದೆ ಈ ಪ್ರಯಾಣ ನಿಜವಾಗ್ಲೂ ಸುಧೀರ್ಘವಾದದ್ದು, ಈ ಹಾದಿಯಲ್ಲಿ ನನಗೆ ಹೂ, ಮುಳ್ಳು ಸರಿಸಮಾನವಾಗಿ ಸಿಕ್ಕವು. ಆದರೆ ನನಗೆ ಯಾವತ್ತು ಯಾವುದು ಕೂಡ ಒಂದು ವರದಂತೆ ಸಿಗಲಿಲ್ಲ ಪ್ರತಿಯೊಂದು ಹೆಜ್ಜೆಯಲ್ಲೂ ಶ್ರಮ, ಬೆವರು,ನೋವು ಎಲ್ಲವು ಇತ್ತು, ಎಲ್ಲವನ್ನು ನಾನು ಖುಷಿಯಾಗಿ ಸ್ವೀಕರಿಸಿದ್ದೇನೆ,ಇದಿಷ್ಟು ಮಾಡೋದಿಕ್ಕೆ ಹೇಗೆ ಸಾಧ್ಯವಾಯಿತೆಂದರೆ ಪ್ರೋತ್ಸಾಹ ಕೊಡೋದಿಕ್ಕೆ ಒಬ್ಬ ಒಡೆಯ ನನ್ನಿಂದ ನಿಂತುಕೊಂಡಿದ್ದ ಅವರೇ ನೀವುಗಳು,ಅಭಿಮಾನಿಗಳು ಎಂದು ಕಿಚ್ಚ ಸುದೀಪ್ ತಮ್ಮ ಸಿನಿ ಜರ್ನಿಯ ಆರಂಭದ ದಿನಗಳನ್ನು ನೆನೆದರು.
ಜರ್ನಿಯಲ್ಲಿ ಜೊತೆಯಾಗಿ ನಿಂತ ಎಲ್ಲರಿಗೂ ಧನ್ಯವಾದ ಹೇಳಿದ ಸುದೀಪ್....
ಪಯಣವನ್ನು ಬಸ್ಸು ಅಂದುಕೊಂಡರೆ ಬಸ್ಸಲ್ಲಿ ಕೆಲವೊಂದಿಷ್ಟು ಜನರ ಜೊತೆ ಶುರುವಾಯಿತೆಂದುಕೊಂಡರೆ , ಇವತ್ತಿಗೂ ನಾನು ಹೇಳಬಲ್ಲೆ ಆ ಬಸ್ಸಲ್ಲಿ ಇನ್ನು ತುಂಬಾ ಒಟ್ಟಿಗಿದ್ದಾರೆ ,ಕೆಲವರು ಮಧ್ಯದಲ್ಲಿ ಇಳಿದು ಹೋಗಿದ್ದಾರೆ.
ಇನ್ನು ಉಳಿದವರಿಗೆ ಮನಸ್ಪೂರ್ವಕವಾಗಿ ಧನ್ಯವಾದಗಳನ್ನು ಹೇಳುತ್ತೇನೆ.
ನಮ್ಮ ಟೆಕ್ನಿಷಿಯನಗೆ,ನನ್ನ ನಿರ್ದೇಶಕರಿಗೆ,ನನಗಾಗಿ ಬಂದು ಕಥೆ ಬರೆಯುವವರಿಗೆ,ನಿರ್ಮಾಪಕರಿಗೆ,ನನ್ನ ಸಹ ಕಲಾವಿದರಿಗೆ,ನನ್ನೊಟ್ಟಿಗೆ ನಟನೆ ಮಾಡಿದ ಎಲ್ಲ ಹೀರೋಯಿನ್ಸ್ ಗೆ , ನನ್ನ ವೀಕ್ನೆಸ್ ಕವರ್ ಮಾಡಿ ಚನ್ನಾಗಿ ತೋರಿಸ್ತಾ ಇರುವ ನನ್ನ ಎಲ್ಲ ಡಿಸೈನರ್ ಗೆ,ಮೇಕಪ್ ಆರ್ಟಿಸ್ಟ್ ಗೆ, ಸರಿ ತಪ್ಪು ಎಲ್ಲದಕ್ಕು ಕೈ ಹಿಡಿದು ನನಗೆ ಬೆಂಬಲ ಕೊಟ್ಟು ನೆಡೆಸಿದಂತಹ ಮಾಧ್ಯಮದವರಿಗೂ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ.
ಒಂದು ಟೈಮಲ್ಲಿ ನಾನು ಕೂಡ ಯಂಗಸ್ಟರ್. ಆ ಸಮಯದಲ್ಲಿ ನನಗು ಕೂಡ ಬೆಂಬಲ,ಪ್ರೋತ್ಸಾಹ ಬೇಕಿತ್ತು. ಅಂತಹ ಸಂದರ್ಭದಲ್ಲಿ ನನಗಾಗಿ ಸಮಯವನ್ನು ಮೀಸಲಿಟ್ಟು, ಸಿನಿಮಾ ನೋಡಿ ಮಾತನಾಡಿ ನನಗೋಸ್ಕರ ನಿಂತಿರುವ ಚಿತ್ರರಂಗದ ಹಿರಿಯರಿಗೆ ಧನ್ಯವಾದಗಳನ್ನು ಹೇಳುತ್ತೇನೆ.
ಕಳೆದ 24 ವರ್ಷಗಳಿಂದ ನನ್ನನ್ನು ಕೈ ಹಿಡಿದು ನೆಡೆಸಿಕೊಂಡು ಬಂದಂತಹ ಎಲ್ಲರಿಗೂ ಧನ್ಯವಾದಗಳು
ಐ ಲವ ಯು.... ಎಂದು ಹೇಳಿ ಕಿಚ್ಚ ತಮ್ಮ ಮಾತು ಮುಗಿಸಿದರು.
ಇನ್ನು ಕಿಚ್ಚ ಸಿನಿ ಪಯಣದ ಕುರಿತು ಮಾತನಾಡಿರುವ ವಿಡಿಯೋ , ಕಿಚ್ಚ ಕ್ರಿಯೆಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದೆ.