KSRTC ಚಾಲಕರು, ನಿರ್ವಾಹಕರು ಕರ್ತವ್ಯದ ವೇಳೆ ಮೊಬೈಲ್ ಬಳಕೆಗೆ ಸಂಸ್ಥೆಯಿಂದ ಅವಕಾಶ

ಸಾಮಾನ್ಯ ಹಾಗೂ ನಗರ ಸಾರಿಗೆ ಚಾಲಕ ಮತ್ತು ನಿರ್ವಾಹಕರು ಕರ್ತವ್ಯ ವೇಳೆ ಮೊಬೈಲ್ ಬಳಸಲು ಅನುಮತಿಯನ್ನು ಸಾರಿಗೆ ನಿಗಮ ನೀಡಿದ್ದು ಮಾರ್ಚ್1 ರಿಂದ ಈ ನೂತನ ನಿಯಮವನ್ನು ಜಾರಿಗೆ ಬರಲಿದೆ ಎಂದು ಕೆಎಸ್‌ಆರ್​ಟಿಸಿವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮಾಹಿತಿ ನೀಡಿದ್ದಾರೆ. ಈ ಹಿಂದೆ ಕೆ.ಎಸ್.ಆರ್.ಟಿ.ಸಿ ನಿಗಮದ ಚಾಲಕ, ನಿರ್ವಾಹಕರಿಗೆ ಕರ್ತವ್ಯದ ವೇಳೆ ಮೊಬೈಲ್ ಬಳಕೆ ನಿಷೇಧಿಸಲಾಗಿತ್ತು. ಇದರಿಂದಾಗಿ ಸಾಕಷ್ಟು ತೊಂದರೆಯೂ ಉಂಟಾಗಿತ್ತು, ಹೀಗಾಗಿ ಬಸ್​ ಅಪಘಾತ, ಅವಘಡಗಳ ವೇಳೆ ಅನುಕೂಲ ಆಗಬೇಕೆನ್ನುವ ದೃಷ್ಟಿಯಿಂದ ಸಾರಿಗೆ ನಿಗಮವು ಮೊಬೈಲ್ ಬಳಕೆಗೆ ಅವಕಾಶ ನೀಡಿದೆ.