ಪ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶಿಸಿದ್ದ ವಿದ್ಯಾರ್ಥಿನಿ ನಳಿನಿಗೆ ಬೇಲ್...!

ಮೈಸೂರು: ಪ್ರತಿಭಟನೆ ವೇಳೆ ಪ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ್ದ ವಿದ್ಯಾರ್ಥಿನಿ ನಳಿನಿ ಹಾಗೂ ಪ್ರತಿಭಟನೆಯನ್ನು ಆಯೋಜಿಸಿದ್ದ ಮೈಸೂರು ವಿವಿ ಸಂಶೋಧಕ ಸಂಘದ ಅಧ್ಯಕ್ಷ  ಎಸ್ .ಮರಿದೇವಯ್ಯ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ದಿಲ್ಲಿಯ ಜೆ.ಎನ್.ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಮೈಸೂರು ವಿ.ವಿಯ ಮಾನಸಗಂಗೋತ್ರಿ ಆವರಣದಲ್ಲಿ ಜನವರಿ.8 ರಂದು ಪ್ರತಿಭಟನೆಯನ್ನು  ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ನಳಿನಿ ಫ್ರೀ ಕಾಶ್ಮೀರ ಪ್ರದರ್ಶಿಸುವ ಮೂಲಕ ಬಹಳಷ್ಟು ವಿವಾದಕ್ಕೆ ಕಾರಣವಾಗಿದ್ದರು ಈ ಕುರಿತು ದೂರು ದಾಖಲಾಗಿತ್ತು, ಈ ಸಂಬಂಧ ಪೊಲೀಸರು ನಳಿನಿ ಮತ್ತು ಮರಿದೇವಯ್ಯ ರನ್ನು ವಶ ಪಡೆದಿದ್ದರು.
 ಈ ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿ ನಳಿನಿ ಹಾಗೂ ಮರಿದೇವಯ್ಯ ಅವರಿಗೆ ಈ ರೀತಿಯ ತಪ್ಪು ಮಾಡಬಾರದು ಎಂದು ಎಚ್ಚರಿಕೆ ನೀಡಿ, ತಲಾ 50 ಸಾವಿರ ಬಾಂಡ್ ಮತ್ತು ಒಬ್ಬರು ಸಾಕ್ಷಿ ಒದಗಿಸಲು ತಿಳಿಸಿ ಷರತ್ತು ಬದ್ದ ಜಾಮೀನು ನೀಡಿದೆ.