ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಮುಷರಫ್ ಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕೋರ್ಟ್
ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಮುಷರಫ ಗೆ ಮರಣದಂಡನೆ ವಿಧಿಸಿದ ಪಾಕಿಸ್ತಾನ ಕೋರ್ಟ್.
ಪರ್ವೇಜ್ ಮುಷರಫ್ ವಿರುದ್ಧ 2013ರಲ್ಲಿ ಸಲ್ಲಿಕೆಯಾಗಿದ್ದ ದೇಶದ್ರೋಹ ಪ್ರಕರಣದ ತೀರ್ಪು ಇಂದು ವಿಶೇಷ ನ್ಯಾಯಮಂಡಳಿ ಪ್ರಕಟಿಸಿದೆ.
ಈ ಪ್ರಕರಣ ಸಂಬಂಧ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಹಾಗೂ ಭಾರತ ಪಾಕ್ ನಡುವಿನ ಕಾರ್ಗಿಲ್ ಯುದ್ಧದ ರೂವಾರಿ ಪರ್ವೇಜ್ ಮುಷರಫ್ , ಅಧಿಕಾರಾವಧಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಾಗಿತ್ತು.
2007ರ ನವೆಂಬರ್ ನಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ದೇಶದಲ್ಲಿ ಅನಗತ್ಯ ಮತ್ತು ಬಲವಂತ, ದುರುದ್ದೇಶಪೂರಿತ ಆಂತರಿಕ ತುರ್ತು ಪರಿಸ್ಥಿತಿ ಹೇರಿದ್ದರು. ಈ ಪ್ರಕರಣದಲ್ಲಿ ಅವರಿಗೆ ಪಾಕಿಸ್ತಾನದ ಕೋರ್ಟ್ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಈ ಪ್ರಕರಣಕ್ಕೂ ಭಾರತಕ್ಕೂ ಸಂಬಂಧ ಏನು.
ಭಾರತ-ಪಾಕಿಸ್ತಾನ ನಡುವಿನ ಕಾರ್ಗಿಲ್ ಯುದ್ಧ ನಡೆಯಲು ಮುಖ್ಯ ಕಾರಣೀಕರ್ತ ಈತನೇ.
ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿ ಹಲವಾರು ಮಂದಿ ಸಾವಿಗೆ ಕಾರಣನಾದ. ಕೊನೆಗೆ ಭಾರತದ ಸೈನ್ಯ ಎದುರು ಪಾಕಿಸ್ತಾನ ಸೇನೆ ಸೋತಿತ್ತು
ಪಾಕಿಸ್ತಾನ ಸೇನೆಯ ಸೇನಾಧಿಕಾರಿಯಾಗಿದ್ದ ಮುಷರಫ್ 1999 ರಿಂದ 2008ರ ವರೆಗೆ ಸೇವೆ ಸಲ್ಲಿಸಿದರು.
ಮೊದಲು ಹಲವಾರು ಕಾರಣಗಳಿಂದ ಇತ್ಯರ್ಥವಾಗದೆ ಉಳಿದ ಪ್ರಕರಣ ಈಗ ಅಂತ್ಯ ಕಂಡಿದೆ.
ಪ್ರಕರಣ ಯಾವಾಗ ವೇಗ ಪಡೆಯಿತು...!!
ನವಾಜ್ ಷರೀಫ್
ಪ್ರಧಾನಿಯಾಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಈ ಪ್ರಕರಣದ ವಿಚಾರಣೆಗೆ ಆದೇಶ ನೀಡಿದ್ದರು. ಬಳಿಕ ಮುಷರಫ್ ಅವರು ಲಂಡನ್ ಗೆ ಪಲಾಯನ ಮಾಡಿದರು.
ಮೇಲಿನ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ನೀಡಿರುವ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.