ಮಾನವನ ದೇಹದಲ್ಲಿದೆಯಂತೆ ಮತ್ತೊಂದು ಅಂಗ, ಶ್ವಾಸಕೋಶದಲ್ಲಿ ಅಡಗಿರುವ ಅಂಗ ಪತ್ತೆ ಹಚ್ಚಿದ ವಿಜ್ಞಾನಿಗಳು!

ಉಸಿರಾಟದ ವಾಯುಮಾರ್ಗ ಸ್ರವಿಸುವ (RAS) ಜೀವಕೋಶಗಳು ಬ್ರಾಂಕಿಯೋಲ್‌ಗಳು ಎಂದು ಕರೆಯಲ್ಪಡುವ ಸಣ್ಣ ಕವಲೊಡೆಯುವ ಹಾದಿಗಳಲ್ಲಿ ಕಂಡುಬರುತ್ತವೆ ಎಂದು ಅಧ್ಯಯನವು ಹೇಳಿದೆ.

 ಬೆಂಗಳೂರು (ಏ.9): ಹೊಸ ಸಂಶೋಧನೆಯಲ್ಲಿ, ವಿಜ್ಞಾನಿಗಳು  (scientists ) ಮಾನವನ ಶ್ವಾಸಕೋಶದ ( human lungs) ಸೂಕ್ಷ್ಮವಾದ, ಕವಲೊಡೆಯುವ ಹಾದಿಗಳೊಳಗೆ ಹೊಚ್ಚ ಹೊಸ ರೀತಿಯ ಜೀವಕೋಶವನ್ನು ಕಂಡುಹಿಡಿದ್ದು, ಇದು ಮಾನವನ ದೇಹದ ಹೊಸ ಅಂಗ ಎಂದು ಹೇಳಲಾಗಿದೆ. ನೇಚರ್ (Nature) ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹೊಸ ಕೋಶವು ಉಸಿರಾಟದ ವ್ಯವಸ್ಥೆಯ (respiratory system ) ಕಾರ್ಯನಿರ್ವಹಣೆಯನ್ನು ಹಾಗೇ ಇರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಹೊಚ್ಚ ಹೊಸ ರೀತಿಯ ಜೀವಕೋಶವು ಕೆಲವು ಧೂಮಪಾನ-ಸಂಬಂಧಿತ ಕಾಯಿಲೆಗಳನ್ನು ಸಹ ಹಿಮ್ಮೆಟ್ಟಿಸುತ್ತದೆ ಎಂದು ಅಧ್ಯಯನವು ಹೇಳಿದೆ. ಉಸಿರಾಟದ ವಾಯುಮಾರ್ಗ ಸ್ರವಿಸುವ (RAS) ಜೀವಕೋಶಗಳು ಬ್ರಾಂಕಿಯೋಲ್‌ಗಳು (bronchioles) ಎಂದು ಕರೆಯಲ್ಪಡುವ ಸಣ್ಣ ಕವಲೊಡೆಯುವ ಹಾದಿಗಳಲ್ಲಿ ಕಂಡುಬರುತ್ತವೆ ಎಂದು ಅಧ್ಯಯನವು ತಿಳಿಸಿದೆ. ಆರ್ ಎಎಸ್ ಕೋಶಗಳು ಕಾಂಡಕೋಶಗಳಂತೆಯೇ ಇರುತ್ತವೆ. ಹೊಸ ಆರ್ ಎಎಸ್  ಕೋಶಗಳು ಹಾನಿಗೊಳಗಾದ ಅಲ್ವಿಯೋಲಿ ಕೋಶಗಳನ್ನು ಸರಿಪಡಿಸಬಹುದು ಮತ್ತು ಅವುಗಳನ್ನು ಹೊಸದಕ್ಕೆ ಪರಿವರ್ತಿಸಬಹುದು.

ಮಹಾರಾಷ್ಟçದಲ್ಲಿ ಒಮಿಕ್ರಾನ್ ಪತ್ತೆ

ಮಾನವನ ಉಸಿರಾಟದ ವ್ಯವಸ್ಥೆಗೆ ಮಾದರಿಗಳಾಗಿ ಇಲಿಗಳ ಶ್ವಾಸಕೋಶವನ್ನು ಅವಲಂಬಿಸಿರುವ ಮಿತಿಗಳಿಂದ ಹೆಚ್ಚು ನಿರಾಶೆಗೊಂಡ ನಂತರ ಸಂಶೋಧಕರು RAS ಕೋಶಗಳನ್ನು ಕಂಡುಹಿಡಿದಿದ್ದಾರೆ. ಆದಾಗ್ಯೂ, ಇವೆರಡರ ನಡುವಿನ ಕೆಲವು ವ್ಯತ್ಯಾಸಗಳ ಕಾರಣ, ವಿಜ್ಞಾನಿಗಳು ಮಾನವ ಶ್ವಾಸಕೋಶದ ಬಗ್ಗೆ ಕೆಲವು ಜ್ಞಾನದ ಅಂತರವನ್ನು ತುಂಬಲು ಹೆಣಗಾಡಿದ್ದಾರೆ. ಸೆಲ್ಯುಲಾರ್ ಮಟ್ಟದಲ್ಲಿ ಈ ವ್ಯತ್ಯಾಸಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು, ತಂಡವು ಆರೋಗ್ಯಕರ ಮಾನವ ದಾನಿಗಳಿಂದ ಶ್ವಾಸಕೋಶದ ಅಂಗಾಂಶದ ಮಾದರಿಗಳನ್ನು ತೆಗೆದುಕೊಂಡಿತು ಮತ್ತು ಪ್ರತ್ಯೇಕ ಜೀವಕೋಶಗಳಲ್ಲಿನ ಜೀನ್‌ಗಳನ್ನು ವಿಶ್ಲೇಷಿಸಿತು. ಇದರಿಂದಾಗಿ ಹಿಂದೆಂದೂ ಗೊತ್ತಾಗದ ಆರ್ ಎಎಸ್ ಕೋಶಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ ಎಂದು ಲೈವ್ ಸೈನ್ಸ್ ವೆಬ್ ಸೈಟ್ ( Live Science Website ) ವರದಿ ಮಾಡಿದೆ.

ತಂಡವು ಫೆರೆಟ್‌ ಪ್ರಾಣಿಗಳಲ್ಲಿ ಕೂಡ  ಆರ್ ಎಎಸ್ ಕೋಶಗಳನ್ನು ಕಂಡುಹಿಡಿದಿದೆ, ಅದರ ಉಸಿರಾಟದ ವ್ಯವಸ್ಥೆಗಳು ಇಲಿಗಳಿಗಿಂತ ಮನುಷ್ಯರಿಗೆ ಹೆಚ್ಚು ಹೋಲುತ್ತವೆ. ಪರಿಣಾಮವಾಗಿ, ಹೆಚ್ಚಿನ ಸಸ್ತನಿಗಳು ತಮ್ಮ ಶ್ವಾಸಕೋಶದಲ್ಲಿ ಆರ್ ಎಎಸ್  ಕೋಶಗಳನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ ಎಂದು ಮೊರ್ರಿಸೆ ಹೇಳಿದ್ದಾರೆ.

ನಿಗೂಢ ಲೋಕದ ಚಿದಂಬರ ರಹಸ್ಯ

ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ( COPD ) ನಂತಹ ಧೂಮಪಾನ-ಸಂಬಂಧಿತ ಕಾಯಿಲೆಗಳಲ್ಲಿ RAS ಕೋಶಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಸಂಶೋಧಕರು ಭಾವಿಸಿದ್ದಾರೆ. ಸಿಒಪಿಡಿ ಶ್ವಾಸಕೋಶದ ಒಳಗಿನ ವಾಯುಮಾರ್ಗಗಳ ಉರಿಯೂತದ ಪರಿಣಾಮವಾಗಿದೆ, ಇದು ಧೂಮಪಾನ ಮತ್ತು ಸಾಂದರ್ಭಿಕವಾಗಿ ವಾಯುಮಾಲಿನ್ಯದಿಂದ ಉಂಟಾಗುತ್ತದೆ ಎಂದು ಮೇಯೊ ಕ್ಲಿನಿಕ್ ತಿಳಿಸಿದೆ. ಶ್ವಾಸನಾಳದ ಉರಿಯೂತದಿಂದಾಗಿಯೂ ಶ್ವಾಸಕೋಶಗಳಿಗೆ ಸಾಕಷ್ಟು ಆಮ್ಲಜನಕವನ್ನು ಸರಿಯಾಗಿ ತೆಗೆದುಕೊಳ್ಳಲು ಕಷ್ಟವಾಗುತ್ತದೆ;. ಪರಿಣಾಮವಾಗಿ, ಸಿಒಪಿಡಿ ಆಸ್ತಮಾದ ಲಕ್ಷಣಗಳನ್ನು ಹೊಂದಿದೆ. ಸಿಒಪಿಡಿ ಎಂಫಿಸೆಮಾಕ್ಕೆ ಕಾರಣವಾಗಬಹುದು, ಇದರಲ್ಲಿ ಅಲ್ವಿಯೋಲಿ ಶಾಶ್ವತವಾಗಿ ನಾಶವಾಗುತ್ತದೆ ಮತ್ತು ದೀರ್ಘಕಾಲದ ಬ್ರಾಂಕೈಟಿಸ್, ದೀರ್ಘಕಾಲದ ಮತ್ತು ತೀವ್ರವಾದ ಕೆಮ್ಮು ಸಾಮಾನ್ಯವಾಗಿ ಹೆಚ್ಚುವರಿ ಕಫದೊಂದಿಗೆ ಇರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ, ಪ್ರಪಂಚದಾದ್ಯಂತ 3 ದಶಲಕ್ಷಕ್ಕೂ ಹೆಚ್ಚು ಜನರು ಸಿಒಪಿಡಿಯಿಂದ ಸಾಯುತ್ತಾರೆ.

ಈ ವರದಿಯಲ್ಲಿ ಆರ್ ಎಎಸ್  ಜೀವಕೋಶಗಳು ಹಾನಿಗೊಳಗಾದ ಅಲ್ವಿಯೋಲಿಯನ್ನು ಸರಿಪಡಿಸುವ ಮೂಲಕ ಸಿಒಪಿಡಿಯ ಪರಿಣಾಮಗಳನ್ನು ತಡೆಯುತ್ತದೆ ಅಥವಾ ಕಡಿಮೆ ಮಾಡುತ್ತದೆ. ಹಾಗಿದ್ದರೂ ಧೂಮಪಾನವು ಹೊಸ ಕೋಶಗಳನ್ನು ಹಾನಿಗೊಳಿಸುತ್ತದೆ ಅಥವಾ ಸಂಪೂರ್ಣವಾಗಿ ನಾಶಪಡಿಸುತ್ತದೆ ಎಂದು ಸಂಶೋಧಕರು ಶಂಕೆ ವ್ಯಕ್ತಪಡಿಸಿದ್ದಾರೆ. ಇದು ಸಿಒಪಿಡಿಯಂತಹ ರೋಗಗಳ ಆಗಮನಕ್ಕೆ ಕಾರಣವಾಗುತ್ತದೆ.