ತಾವರಗೇರಾ ನಗರದ ಸರ್.ಎಂ.ವಿಶ್ವೇಶ್ವರಯ್ಯ ಸಂಯುಕ್ತ ಪದವಿ ಕಾಲೇಜಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭ...
ತಾವರಗೇರಾ ನಗರದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಸಂಯುಕ್ತ ಪದವಿ ಕಾಲೇಜುನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮಹಾ ಸರಸ್ವತಿ ಪೂಜೆ ಹಾಗೂ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ಸಮಾರಂಭವನ್ನು ಉದ್ಘಾಟನೆ ಮಾಡಿದ ವೆಂಕೊಬಣ್ಣ.ಹೆಚ್.ಭಾವಿತಾಳ ಪ್ರಾಚಾರ್ಯರು ಎಸ್.ಎಸ್.ವ್ಹಿ ಕಾಲೇಜು, ವಿದ್ಯಾರ್ಥಿಗಳನ್ನು ಉದ್ದೇಶಿಸಿ, ವಿದ್ಯಾರ್ಥಿಗಳು ಪರಿಶ್ರಮ, ಆಸಕ್ತಿಯಿಂದ ಅಧ್ಯಯನ ಮಾಡಬೇಕು.ಜ್ಞಾನವೇ ಶಕ್ತಿ ಈಗಿನ ಮೊಬೈಲ್ ಯುಗದಲ್ಲಿ ಬಳಕೆ ಕಡಿಮೆ ಮಾಡಿ ಓದಿ ಜೀವನದಲ್ಲಿ ಭವಿಷ್ಯವನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಳ್ಳಿ ಎಂದು ಹೇಳಿದರು. ಇನ್ನು ಶರಣಪ್ಪ ಮುಗಳಿ ದೈಹಿಕ ಶಿಕ್ಷಕರು, ಮಾತನಾಡಿ ವಿದ್ಯಾರ್ಥಿಗಳಿಗೆ ಶಿಸ್ತು,ಸಮಯಪ್ರಜ್ಞೆ ಮುಖ್ಯ ಮತ್ತು ತಂದೆ ತಾಯಿ ಹಾಗೂ ಗುರು ಹಿರಿಯರನ್ನು ಗೌರವಿಸಬೇಕು. ವಿದ್ಯಾಬ್ಯಾಸ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು ಎಂದು ಹೇಳಿದರು.
ಇನ್ನು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ರಾಯಚೂರಿನ ಪಿಎಸ್ಐ ಶಶಿಧರ ಗುಡದೂರ ಮಾತನಾಡಿ, ವಿದ್ಯಾರ್ಥಿಗಳಿಗೆ ಸತತ ಪ್ರಯತ್ನ,ಪರಿಶ್ರಮ,ಗುರಿ, ಏಕಾಗ್ರತೆ ಮುಖ್ಯ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ 2018-19ನೇ ಸಾಲೀನ ಅತಿ ಹೆಚ್ಚು ಅಂಕ ಪಡೆದವರಿಗೆ ಗೌರವಿಸಲಾಯಿತು. ಹಾಗೂ ದ್ವಿತೀಯ ಪಿಯುಸಿ ಎಲ್ಲಾ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಜನತಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ನಾಲತ್ವಾಡ, ಉಪಾಧ್ಯಕ್ಷ ಮಲ್ಲನಗೌಡ ಓಲಿ,ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಹನುಮಂತಪ್ಪ ಐಲಿ, ಅಮರೇಗೌಡ ಸರನಾಡಗೌಡರ, ಶಿವನಗೌಡ ವಿಠಲಾಪೂರ ಪಾಲ್ಗೊಂಡರು ಹಾಗೂ ಸಂಗಪ್ಪ ಉಪನ್ಯಾಸಕರು ಕಾರ್ಯಕ್ರಮ ನಿರೂಪಿಸಿದರು,ಲಕ್ಷ್ಮಣ್ ಸಿಂಗ್ ಪ್ರಾಚಾರ್ಯರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು ಹಾಗೂ ಜನತಾ ಶಿಕ್ಷಣ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ ಶರಣಪ್ಪ ಕುಂಬಾರ ತಾವರಗೇರಾ..