ಬಡ್ಡಿಯ ಮೇಲೆ ಬಡ್ಡಿ  ಆಕ್ಷೇಪಾರ್ಹ  ಸುಪ್ರೀಂಕೋರ್ಟ್​ ಅಭಿಪ್ರಾಯ..

ಬಡ್ಡಿಯ ಮೇಲೆ ಬಡ್ಡಿ  ಆಕ್ಷೇಪಾರ್ಹ :  ಸುಪ್ರೀಂಕೋರ್ಟ್​ ಅಭಿಪ್ರಾಯ..


ಸಾಲದ ಕಂತು ಮರುಪಾವತಿಗೆ ಕಾಲಾವಕಾಶ ಒಳ್ಳೆಯ ನಿರ್ಧಾರ ಆದರೆ ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದು ಆಕ್ಷೇಪಾರ್ಹ ವಿಷಯ. ಕೊರೊನಾ ಬಿಕ್ಕಟ್ಟಿನ ನಡುವೆ (ಇಎಂಐ ಮೊರಟೋರಿಯಂ) ಮರುಪಾವತಿ ಮುಂದದೂಡಿರುವುದು ಎಲ್ಲರಿಗೂ ಸ್ವಲ್ಪ ಮಟ್ಟಿಗೆ ಸಂತಸದ ವಿಷಯವೇ ಸರಿ . ಗೃಹ ಸಾಲ ವಾಹನ ಸಾಲ ಸೇರಿದಂತೆ ಎಲ್ಲಾ ಬಗ್ಗೆಯ ಸಾಲ  ಮೊದಲ ಮೂರು ತಿಂಗಳಿಗೆ ಇಎಂಐ ಮರುಪಾವತಿ ಮುಂದೂಡಿತ್ತು ಆರ್​ಬಿಐ ನಂತರ ಇನ್ನೂ ಮೂರು ತಿಂಗಳ ಅವಧಿಗೆ ವಿಸ್ತರಿಸಿತು . ಆದರೆ ಎಲ್ಲಾ  ನಿರ್ಧಾರ ಬ್ಯಾಂಕ್​ಗಳ ವಿವೇಚನೆಗೆ ಬಿಡಬಾರದು ಕೊಡಲೇ ಕೇಂದ್ರ ಸರ್ಕಾರ ಮಧ್ಯಪ್ರೇಶಿಸಬೇಕು. ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಆಗ್ರಾದ ನಿವಾಸಿ ಗಜೇಂದ್ರ ಶರ್ಮಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ  ಅರ್ಜಿ(ಪಿಐಲ್). ಸಾಲದ ಕಂತು ಪಾವತಿ ಮುಂದೂಡಿಕೆ ಅವಧಿಗೆ ಬಡ್ಡಿ ವಿಧಿಸುವ (ಆರ್​ಬಿಐ) ಅಧಿಸೂಚನೆ ಪ್ರಶ್ನಿಸಿ ಕೋರ್ಟ್​ ಬಾಗಿಲು ತಟ್ಟಿದ್ದರು .
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಆರ್​ಬಿಐ ಪರ ವಾದ ಮಂಡಿಸಿದ ಸಾಲಿಸಿಟರ್​ ಜನರಲ್ ತುಷಾರ್ ಮೆಹ್ತಾ. ಸಾಲ ಮರು ಪಾವತಿ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಿದರೆ . 133ಲಕ್ಷ ಕೋಟಿ ಠೇವಣಿಗಳಿದ್ದು, ಠೇವಣಿದಾರರಿಗೆ ಬಡ್ಡಿ ನೀಡಬೇಕಾಗುತ್ತದೆ. ಇಎಂಐ ಬಡ್ಡಿ ಮನ್ನಾ ಮಾಡಿದರೆ ಬ್ಯಾಂಕಗಳಿಗೆ ಅಂದಾಜು 2ಲಕ್ಷ ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ , ಎಂದು ಆರ್​ಬಿಐ ಗೆ ಬ್ಯಾಂಕಗಳ ಒಕ್ಕೂಟ ಮನವಿ ಮಾಡಿದರು. ಬಡ್ಡಿ ಮನ್ನಾ ಮಾಡಿದರೆ ಬ್ಯಾಂಕಗಳಿಗೆ ಕಷ್ಟವಾಗಲಿದೆ ಎಂದು ಸಹ ಉಲ್ಲೇಖಿಸಿದರು.
ಸುಪ್ರೀಂಕೋರ್ಟ ಈ ವಿಚಾರಣೆಯನ್ನು ಆಗಸ್ಟ್ ಮೊದಲ ವಾರಕ್ಕೆ ಮುಂದೂಡಿದೆ . ಕೇಂದ್ರ ಸರ್ಕಾರ ಹಾಗೊ ಆರ್​ಬಿಐಗೆ  ಪರಿಸ್ಥಿತಿಯನ್ನು ಪರಾಮರ್ಶಿಸಲಿ. ನಂತರ ಇಎಂಐ ಮುಂದೊಡಿಕೆ ಬಗ್ಗೆ ಹೊಸ ಮಾರ್ಗಸೂಚಿ ತರಲು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್​ಗೆ ಸೂಚಿಸಿದೆ.