22 ಯಾರ್ಡ್ಸ್ನಲ್ಲಿ ಕಳೆದ 12 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸೋತಿಲ್ಲ ಭಾರತ

22 ಯಾರ್ಡ್ಸ್ನಲ್ಲಿ ಕಳೆದ 12 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡದ ವಿರುದ್ಧ ತನ್ನ ಸಾರ್ವಭೌಮತ್ವವನ್ನು  ಭಾರತ ತಂಡ ಮುಂದುವರಿಸಿಕೊಂಡು ಬಂದಿದೆ.
12  ವರ್ಷದಲ್ಲಿ ಸತತ 9 odi ಸರಣಿ ತನ್ನದಾಗಿಸಿಕೊಂಡಿದೆ . ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಎಲ್ಲ ಏಕದಿನ ಶ್ರೇಣಿಯನ್ನು ತನ್ನದಾಗಿಸಿಕೊಂಡಿರುವ ಭಾರತ ತಂಡ, ಈ ಸಲದ ಶ್ರೇಣಿಯನ್ನು ಭಾರತ ತಂಡ ಗೆದ್ದರೆ ಒಟ್ಟು 10 ಸರಣಿ ಗೆದ್ದ ಸಾಧನೆಗೆ ಭಾಜನವಾಗಲಿದೆ.
2007ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವ ದಿಂದ 2019ರ ವಿರಾಟ್ ಕೊಹ್ಲಿ ಅವರ ನಾಯಕತ್ವ ವರೆಗು ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಸೋತಿಲ್ಲ. 

ಭಾರತ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಪಂದ್ಯ ಎಂದರೆ ಕ್ರಿಕೆಟ್ ಪ್ರೇಮಿಗಳಿಗೆ,ಅದೆಂಥದೋ ಒಂಥರಾ ಸಂತಸ ಸಡಗರ ಉಭಯ ತಂಡಗಳ ಪಂದ್ಯಗಳಲ್ಲಿ ಮನೋರಂಜನೆ ಹೆಚ್ಚು .
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಟಗಾರರು ಎಂದರೆ ಎಲ್ಲಾ ದೇಶದ ಕ್ರಿಕೆಟ್ ಪ್ರೇಮಿಗಳಿಗೆ ಬಹಳ ಇಷ್ಟ. ಈ ತಂಡದಲ್ಲಿ ವೈಯಕ್ತಿಕವಾಗಿ ಘಟಾನುಘಟಿ ಆಟಗಾರರಿದ್ದಾರೆ ಅವರಲ್ಲಿ ವಿವಿಯನ್ ರಿಚರ್ಡ್ಸ್ ಬ್ರಿಯಾನ್ ಲಾರಾ  ಈಗಿನ ಕ್ರಿಸ್ ಗೇಲ್, ವರೆಗೂ ಪ್ರತೀತಿ ಹೊಂದಿದೆ.

ಡಿಸೆಂಬರ್ 15 ರಿಂದ 22ರವರೆಗೆ ನಡೆಯಲಿರುವ ಈ ಮೂರು ಏಕದಿನ ಪಂದ್ಯದ ಸರಣಿ ಇದಾಗಲಿದ್ದು.

ಮೊದಲ ಪಂದ್ಯ ಚೆನ್ನೈನ M.A ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದ್ದು.
ಎರಡನೇ ಪಂದ್ಯ ವಿಶಾಖಪಟ್ಟಣದ ವೈ ಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಮೂರನೇ ಹಾಗೂ ಕಡೆಯ ಏಕದಿನ ಪಂದ್ಯ ಕಟಕ'ನಾ ಬಾರಾ ಬಟ್ಟಿ ಸ್ಟೇಡಿಯಂನಲ್ಲಿ ಮುಕ್ತಾಯಗೊಳ್ಳಲಿದೆ.
ಈ ಸರಣಿ ಟೀಮ್ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿದೆ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಲು ಸಜ್ಜಾಗಿದೆ.

ತಂಡದಲ್ಲಿ ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ(ನಾಯಕ) ರೋಹಿತ್ ಶರ್ಮಾ(ಉಪನಾಯಕ) ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ಶಿವಂ ದುಬೆ, ವಾಶಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ,ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್,ದೀಪಕ್ ಚಹರ್, ಮೊಹಮದ್ ಶಮಿ, ಭುವನೇಶ್ವರ ಕುಮಾರ್, ಸಂಜು ಸಮ್ಸನ್, ಮಾಯಾಂಕ್ ಅಗರ್ವಾಲ್, ಸಂಭವನೀಯ ತಂಡವಾಗಿದೆ.