ಹಲವು ಬೇಸರ...ಒಂದು ಕಾರಣ..ಅದುವೇ ಕೊರೊನಾ..
ಕೊರೊನಾ ಎಂಬ ಮಹಾಮಾರಿಯು ಭಾರತಕ್ಕೆ ಬೇರೆ ದೇಶಗಳಿಂದ ಬಂದ ಕೂಡಲೇ
ಪ್ರಧಾನಿ ಮೋದಿ ಅತಿ ದೊಡ್ಡ ಆದೇಶವನ್ನು ಹೊರಡಿಸಿದ್ದರು. ಅದುವೇ.."ಲಾಕ್ ಡೌನ್".
ಪ್ರಧಾನಿ ಮೋದಿ ಲಾಕ್ ಡೌನ್ ಆದೇಶವನ್ನು ಮೊದಲಿಗೆ ಕೆಲವು ದಿನಗಳ ಕಾಲ ಘೋಷಿಸಿದ್ದರು.ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವವರು, ದಿನ ನಿತ್ಯ ಹೊರಗಡೆ ಹೋಗಿ ಕೆಲಸ ಮಾಡುವವರ ಮನಸ್ಸಲ್ಲಿ "ರಜೆ" ಎಂಬ ಖುಷಿ ಮನೆ ಮಾಡಿತ್ತು. ಆದರೇ.. ಲಾಕ್ ಡೌನ್ ಮುಂದುವರೆಯುತ್ತಾ ಹೋದಂತೆ ಮನೆಯಲ್ಲಿ ಕೂತು ಒಂದು ತಿಂಗಳೇ ಕಳೆದಿದೆ... ಸಧ್ಯ ಲಾಕ್ ಡೌನ್ ಮುಗಿದು ಯಾವಾಗ ಮನೆಯಿಂದ ಆಚೆ ಹೋಗ್ತೀವಿ ಅನೋ ಪ್ರಶ್ನೆ ಎಲ್ಲರಿಗೂ ಕಾಡ್ತಾ ಇದೆ.
ಇದೆಲ್ಲದರ ಮಧ್ಯೆ ಈ "ಕೊರೊನ ಎಫ್ಫೆಕ್ಟ್" ಜನರಲ್ಲಿ ಭಾರಿ ಬೇಸರ ಮೂಡಿಸಿದೆ..
●ಯವುದಾದ್ರು ಎಮರ್ಜೆನ್ಸಿ ಕಾಲ್ ಮಾಡ್ಬೇಕು ಅಥವಾ ಸ್ನೇಹಿತರೊಂದಿಗೆ, ಸಂಬಂಧಿಕರೊಂದಿಗೆ ಕರೆ ಮಾಡಬೇಕು ಅಂದ್ರೆ ಕರೆಗು ಮುನ್ನ ಕೊರೊನ ಮುನ್ನಚರಿಕೆ ಕೇಳಿಸುತ್ತದೆ.ಪ್ರತಿ ಬಾರಿ ಕರೆ ಮಾಡುವ ಮುನ್ನ ಕೊರೊನ ಕಥೆ ಕೇಳಿ ಕೇಳಿ ಜನರಿಗೆ ಸಾಕಾಗಿದೆ.. ಇದು ನಮ್ಮ ಜನರಿಗೆ ಸ್ವಲ್ಪ ತಲೆ ನೋವು ಅಂತಾನೆ ಹೇಳ್ಬೋದು..
●ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಫಾರ್ವರ್ಡ್ ಮೆಸೇಜ್ ಗಳು ಜನರನ್ನು ಕಂಗೆಡಿಸಿವೆ. ಜನರು ಯಾವುದು ನಿಜ ಯಾವುದು ಸುಳ್ಳು ಎಂಬ ಕನಫ್ಯೂಸ್ ಸ್ಟೇಟ್ ನಲ್ಲಿದ್ದಾರೆ. ಕೊರೊನ ಹೇಗೆ ಬಂತು, ಕೊರೊನ ಹೇಗೆ ಹೋಗುತ್ತದೆ, ಕೊರೊನ ಬರಲು ಕಾರಣವೇನು, ಕೊರೊನ ಹೆಚ್ಚಾಗಲು ಕಾರಣವೇನು, ಕೊರೊನ ಹೋಗಲು ಯಾವ ಪೂಜೆ ಪುನಸ್ಕಾರ ಮಾಡ್ಬೇಕು ಅದು ಇದು ಹೀಗೆ ಹತ್ತು ಹಲವಾರು ವಾಟ್ಸಾಪ್ ಫಾರ್ವರ್ಡ್
ಮೆಸೇಜ್ ಗಳು ಹರಿದಾಡುತ್ತಿವೆ.
●ಲಾಕ್ ಡೌನ್ ನಿಂದಾದಗಿ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಸ್ಟ್ರೀಟ್ ಫುಡ್ ಬಂದ್ ಆಗಿರೋದು ಜನರಿಗೆ ಹೆಚ್ಚು ಬೇಜಾರು ತಂದಿದೆ. ಮಾಂಸ ಮಾರಾಟ ಮಾಡ್ಬಾರ್ದು ಅಂತ ಹೇಳಿದಾಗ್ಲೂ ಜನರು ಬಿಟ್ಟಿಲ್ಲ, ಗುಂಪು ಗುಂಪು ಜನ ಮಾಂಸದ ಅಂಗಡಿ ಮುಂದೆ ನಿಂತಿದ್ರು. ಇನ್ನು ಸರಕಾರವೇ ಮಾಂಸ ಮಾರಾಟಕ್ಕೆ ಒಪ್ಪಿಗೆ ನೀಡಿದೆ. ಹಾಗಾಗಿ ಮಾಂಸದ ಚಿಂತೆ ಇನ್ನಿಲ್ಲ.ಇನ್ನು ಪಾನಿ-ಪುರಿ, ಗೋಬಿ ಎಲ್ಲವೂ ಮನೆಯಲ್ಲೆ ಸದ್ಯಕ್ಕೆ ತಯಾರಿ ನಡಿತಾಯಿದೆ. ಇದೆಲ್ಲ ಒಂದಾದದ್ರೆ ಮದ್ಯಪಾನದ ಚಿಂತೆ ತುಂಬಾನೇ ಜನರಲ್ಲಿ ಕಾಡ್ತಾ ಇದೆ.ಯಾವಾಗ ಸರ್ಕಾರ ಬಾರ್ ಒಪನ್ ಮಾಡಲು ಒಪ್ಪಿಗೆ ಕೊಡುತ್ತೆ ಅಂತ ಜನರು ನಿರೀಕ್ಷೆಯಲ್ಲಿದ್ದಾರೆ.
●ಲಾಕ್ ಡೌನ್ ಶುರುವಿನಲ್ಲಿ ಐಟಿ-ಬಿಟಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದವರಿಗೆ ಮನೆಯಿಂದ ಕೆಲಸ ಮಾಡಲು ಹೇಳಿದಾಗ ಅವರ ಖುಷಿಗೆ ಲೆಕ್ಕನೇ ಇರಲಿಲ್ಲ..ಆದರೇ ಈಗ ಕೆಲಸಕ್ಕೆ ಕಂಪನಿಗೆ ಕರದ್ರೇ ಸಾಕಪ್ಪ..ಅನ್ನೋ ಸ್ಥಿತಿಗೆ ಬಂದಿದ್ದಾರೆ. ಇಂಟರ್ನೆಟ್ ಪ್ರಾಬ್ಲಮ್, ವಿಡಿಯೋ ಕಾಲಿಂಗ್, ರಿಪೋರ್ಟ್, online meeting ಎಲ್ಲವು ಸಾಕಾಗಿದೆ.
●ಇವೆಲ್ಲಾದರ ಮಧ್ಯೆ ಸರಿಯಾಗಿ ಐಪಿಎಲ್ ಟೈಮ್ ಗೆ ಬರಬೇಕಿತ್ತಾ ಈ ಕೊರೊನಾ ಅಂತ ಕ್ರಿಕೆಟ್ ಪ್ರಿಯರು ಅದೆಷ್ಟು "ಟಿ-20 ಐಪಿಎಲ್"ನ ಮಿಸ್ ಮಾಡ್ಕೊಂತಿದ್ದಾರೊ...
●ಇವೆಲ್ಲಾ ಒಂದಾದರೆ ಇತ್ತ ಪ್ರೇಮಿಗಳು ಒಬ್ಬರನೊಬ್ಬರು ನೋಡಲಾರದೆ ಪರಸ್ಪರ ಮಾತನಾಡಲಾರದೆ ಅದೆಷ್ಟು ಹಿಡಿ ಶಾಪಗಳನ್ನು ಕೊರೊನಾಗೆ ಹಾಕ್ತಾ ಇದ್ದಾರೋ..!
ಜನರಿಗೆ ಬೇಸರ ಮೂಡಿಸಿರುವ ಕಾರಣಗಳು ಬೇರೆ ಬೇರೆ ಇರಬಹುದು ಆದರೆ ಎಲ್ಲಾ ಬೇಸರಕ್ಕೆ ಕಾರಣ ಈ ಕೊರೊನಾ...ಆದಷ್ಟು ಬೇಗ ಈ ಕೊರೊನಾದಿಂದ ಮುಕ್ತಿ ಸಿಗಲಿ ಅಂತಾ ಎಲ್ಲರೂ ದೇವರಲ್ಲಿ ಬೇಡಿಕೊಳ್ಳುತ್ತಿದ್ದು, ಜೀವನ ಮೊದಲಿನಂತೆ ಆದ್ರೆ ಸಾಕು ಎಂದುಕೊಳ್ಳುತ್ತಿದ್ದಾರೆ.