ರ್ಯಾಪರ್ ಚಂದನ್ ಶೆಟ್ಟಿ


ಸಂಗೀತಕ್ಕೆ ಮನಸೋಲದವರೇ ಇಲ್ಲಾ...
ಅದರಲ್ಲೂ ಇತ್ತೀಚೆಗೆ ಫಾಸ್ಟ್ ಸಾಂಗ್, ರ್ಯಾಪ್  ಸಾಂಗ್ ಗಳನ್ನ ಸಂಗೀತ ಪ್ರಿಯರು ಹೆಚ್ಚು ಇಷ್ಟ ಪಡುತ್ತಿದ್ದಾರೆ.ಇಂತಹ ಮಾಯಾ ಕ್ಷೇತ್ರದಲ್ಲಿ ವಿಶ್ವದ  ಮೂಲೆ ಮೂಲೆಯ ಕೇಳುಗರ, ಸಂಗೀತ ಪ್ರಿಯರ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆದವರಲ್ಲಿ ಚಂದನ್ ಶೆಟ್ಟಿ ಕೂಡ ಒಬ್ಬರು.

ಕನ್ನಡ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿ ಜಾಗತಿಕ ಮಟ್ಟದಲ್ಲಿ ಕನ್ನಡ ಹಾಡುಗಳಿಗೆ ವಿಶೇಷ ಸ್ಥಾನ ಕಲ್ಪಿಸಿಕೊಟ್ಟ ಚಂದನ್ ಶೆಟ್ಟಿ ಆರಂಭದ ದಿನಗಳು ಮಾತ್ರ ನಿಜಕ್ಕೂ ಕಷ್ಟಕರವಾಗಿದ್ದವು.

ಬಾತ್ ರೂಮ್ ನಲ್ಲಿ ಹಾಡಿ ಸ್ನೇಹಿತರ ಪ್ರೋತ್ಸಾಹದಿಂದ ಹಾಡುಗಾರನಾಗಿ ರೂಪುಗೊಂಡಿದ್ದು ...! 

ಕಾಲೇಜು ದಿನಗಳಲ್ಲಿ ಸ್ನಾನಕ್ಕೆ ಹೋಗುವ ಸಮಯದಲ್ಲಿ ಸ್ನೇಹಿತರ ಜೊತೆಗೂಡಿ
 ಬಕೆಟ್ ಗಳನ್ನೇ ಸಂಗೀತದ ಎಕ್ಯುಪ್ಮೆಂಟ್ಸ್ ಎಂಬಂತೆ ಹಾಡುತ್ತಿದ್ದು, ಅದು ಮುಂದುವರೆದು  ಕಾಲೇಜಿನ ಸ್ಟೇಜ್ ಮೇಲೆ ಪರ್ಫಾರ್ಮೆನ್ಸ್ ಮಾಡುವವರೆಗು  ಬೆಳೆದು ಮೊದಲ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಯಿತು .
 
 ಡಿಪ್ರೆಷನ್ ಹೋಗಿರುವರನ್ನ ತಮ್ಮ ಸಂಗೀತದ ಮೂಲಕ ರಂಜಿಸುತ್ತಿದ್ದ ಚಂದನ್  ಡಿಪ್ರೆಷನ್ ಗೆ ಹೋಗಿದ್ದು  ಯಾಕೆ..? 

ಜೀವನದ ಜಂಜಾಟದಿಂದ ಡಿಪ್ರೆಶನ್ ಗೆ ಹೋಗಿದ್ದ ಅದೆಷ್ಟೋ ಸಂಗೀತ ಪ್ರಿಯರಿಗೆ ತಮ್ಮ ಸಂಗೀತದ ಮೂಲಕ ಮನರಂಜನೆ ನೀಡುತ್ತಿದ್ದ ಚಂದನ್ ಶೆಟ್ಟಿ ಅವರು ಸ್ವತಃ ಅವರೇ ಡಿಪ್ರೆಶನ್ ಗೆ ಹೋಗಿದ್ದನ್ನು ಹೇಳಿಕೊಂಡಿದ್ದಾರೆ.ಅದು ಸುಮಾರು " 3 ಪೆಗ್"  ಮತ್ತು "ಚಾಕಲೇಟ್ ಗರ್ಲ್" ಇನ್ನೂ ಅನೇಕ ಹತ್ತು ಕ್ಕೂ ಅಧಿಕ ವಿಡಿಯೋಗಳನ್ನು ಅವರ ಯ್ಯೂಟ್ಯೂಬ್ ಚಾನೆಲ್ ಅನ್ನು  ಕೆಲ ಕಿಡಿಗೇಡಿಗಳು ಹ್ಯಾಕ್   ಮಾಡಿ 
ಸಂಪೂರ್ಣ ಡಿಲೀಟ್ ಮಾಡಿದ್ದರು.
ಆ ಸಂದರ್ಬದಲ್ಲಿ ಅದೇ ನೋವಿನಿಂದ
 ಹೊರಬಾರದೇ ಡಿಪ್ರೆಷನ್ಗೆ ಹೋಗಿದ್ದನ್ನು ಹೇಳಿಕೊಂಡಿದ್ದಾರೆ.