ದೇಶ್ಯಾದಂತ ಜನತಾ ಕರ್ಫ್ಯೂ ಗೆ ಭಾರಿ ಬೆಂಬಲ : ಸಂಪೂರ್ಣ ಸ್ಥಬ್ಧವಾಗಿದೆ ಭಾರತ....

ನವದೆಹಲಿ : ಮಹಾಮಾರಿ ಕೊರೊನಾ ಹರಡುವಿಕೆಯನ್ನು ತಡೆಯಲು ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಗೆ ದೇಶ್ಯಾದಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಜನ ತಮಗೇ ತಾವೇ ಸ್ವಯಂ ನಿರ್ಬಂಧ ವಹಿಸಿಕೊಂಡು, ಯಾರು ರಸ್ತೇಗಿಳಿಯದೇ ಮನೆಯಲ್ಲಿ ಉಳಿದಿದ್ದಾರೆ.

ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಹಾಗೂ ಭಾರತದಲ್ಲೂ ವೇಗವಾಗಿ ತನ್ನ ಕಬಂಧಬಾಹುಗಳನ್ನು ವಿಸ್ತರಿಸುತ್ತಿರುವ ಕಿಲ್ಲರ್ ಕೊರೊನಾ ವನ್ನು ನಿಯಂತ್ರಿಸುವ ದ್ರಷ್ಟಿಯಿಂದ ದೇಶದ ಜನತೆಗೆ ಜನತಾ  ಕರ್ಫ್ಯೂ  ಆಚರಿಸುವಂತೆ ಕರೆ ನೀಡಿದ್ದರು. ಮಾರ್ಚ್ 22 ರ ಬೆಳಿಗ್ಗೇ 7 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಯಾರೂ ಮನೆಯಿಂದ ಹೊರ ಬಾರದಂತೆ ಮನವಿ ಮಾಡಿದ್ದರು.

ಪ್ರಧಾನಿ ಮೋದಿ ಮನವಿಗೆ ಸ್ಪಂದಿಸಿರುವ ದೇಶದ ಜನ ಜನತಾ  ಕರ್ಫ್ಯೂ ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಪರಿಣಾಮ ದೇಶ ಅಕ್ಷರಶಃ ಸ್ತಬ್ಧವಾಗಿದೆ. 
ರಸ್ತೇಗಳೆಲ್ಲ ಜನರಿಲ್ಲದೇ ಬೀಕೋ ಎನ್ನುತ್ತಿವೆ. ಹೊಟೇಲ್ , ಚಿತ್ರಮಂದಿರ , ಪಬ್ , ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಎಲ್ಲವು ಬಂದ್ ಆಗಿವೆ. ವೈದ್ಯಕೀಯ ಹಾಗೂ ಮತ್ತಿತರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆ ಎಲ್ಲವನ್ನೂ ಬಂದ್ ಮಾಡಿಸಲಾಗಿದೆ. 

ಜನತಾ ಕರ್ಫ್ಯೂ ಗೆ ಪ್ರಧಾನಿ ಕರೆ ನೀಡಿದ್ದೇಕೆ...?

ಕಿಲ್ಲರ್ ಕೋರೊನಾಗೆ ಇನ್ನು ಯಾವ ದೇಶ ಸಹ ಔಷಧಿ ಕಂಡು ಹಿಡಿದಿಲ್ಲ. ಆದ್ದರಿಂದ ಮಹಾಮಾರಿ ಕೋರೊನಾ ತಡೆಯಲು ಇರುವ ಏಕೈಕ ಮಾರ್ಗವೆಂದರೆ ಅದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಸೋಷಿಯಲ್ ಡಿಸ್ಟನ್ಸ್ ಒಂದೇ ಇದಕ್ಕೆ ಪರಿಹಾರ ಎಂದರಿತಿರುವ ಮೋದಿ ಜನತಾ  ಕರ್ಫ್ಯೂ  ಮೂಲಕ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡ್ತಿದ್ದಾರೆ. ಕೊರೊನಾ ವೈರಸ್ ನಿಂದ ಅತಿ ಹೆಚ್ಚು ಬಾಧಿತ ನಗರ ಚೀನಾದ ವುಹಾನ್ ನಲ್ಲಿ ಕೊರೊನಾ ವನ್ನು ನಿಯಂತ್ರಣಕ್ಕೆ ತಂದಿದ್ದು ಇದೇ ಸಾಮಾಜಿಕ ಅಂತರ ಎನ್ನುವ ಸೂತ್ರದ ಮೂಲಕ. ಆದ್ದರಿಂದ ನಾವೂ ಸಹ ಆದಷ್ಟು ಸಾಮಜಿಕ ಅಂತರ ಕಾಯ್ದುಕೊಳ್ಳೋಣ. ಮತ್ತು  ಆದಷ್ಟು ಬೇಗ ನಮ್ಮ ದೇಶ ಕೊರೊನಾ ಮಕ್ತವಾಗಲಿ ಎಂದು ಪ್ರಾರ್ಥಿಸೋಣ...