ಇನ್ಮುಂದೆ ಆನ್ಲೈನ್ ನಲ್ಲೇ ರೈಲ್ವೆ ರಿಸರ್ವೇಶನ್ ಚಾರ್ಟ್ ಚೆಕ್ ಮಾಡಬಹುದು....
ನವದೆಹಲಿ : ರೈಲ್ವೆ ಇಲಾಖೆ ಆನ್ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸುವ ವೆಬ್ ಪೋರ್ಟಲ್ ನ್ನು ಅಪ್ಡೇಟ್ ಮಾಡಲಾಗಿದ್ದು ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲ ಒದಗಿಸಿಕೊಟ್ಟಿದೆ.
ಈ ಕುರಿತು ಟ್ವಿಟ್ ಮಾಡಿರುವ ಪಿಯೂಶ್ ಗೋಯಲ್ ಇನ್ನು ಕಿರಿಕಿರಿ ರಹಿತ ಪ್ರಯಾಣ ಮಾಡಬಹುದುು. ಪ್ರಯಾಣಿಕರು ಖಾಲಿ ಹಾಗೂ ಬುಕ್ ಆಗಿರುವ ಸೀಟುಗಳ ಮಾಹಿತಿ ಇರುವ ಚಾರ್ಟ್ನ್ನು ನೋಡಬಹುದು ಎಂದು ಹೇಳಿದ್ದಾರೆ.
ಐಆರ್ ಸಿಟಿಸಿ ವೆಬ್ ನಲ್ಲಿ ಹಾಗೂ ಆಪ್ ನಲ್ಲಿ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರು ಇನ್ಮುಂದೆ
ರಿಸರ್ವೇಶನ್ ಚಾರ್ಟ್ ಅನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ರೈಲು ಹೊರಡುವ ನಾಲ್ಕು ತಾಸುಗಳ ಮೊದಲು ಚಾರ್ಟ್ ಸಿದ್ಧವಾಗಲಿದೆ. ಕೊನೆಯ ಚಾರ್ಟ್ನ್ನು ರೈಲು ಹೊರಡುವ ಮೂವತ್ತು ನಿಮಿಷಗಳ ಮೊದಲು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ, ಎರಡು ಪಟ್ಟಿಯನ್ನು ವೀಕ್ಷಿಸಬಹುದು..