2 ಕೋಟಿ ಮೌಲ್ಯದ ರಕ್ತಚಂದನ ಪೊಲೀಸರ ವಶಕ್ಕೆ!
ಮಂಗಳೂರು : ಥಾಯ್ಲೆಂಡ್ ಗೆ ಸಾಗಿಸಲು ಸಂಗ್ರಹಿಸಿಟ್ಟ 2 ಕೋಟಿ ಮೌಲ್ಯದ ರಕ್ತಚಂದನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೈಕಂಪಾಡಿಯ ಗೋದಾಮಿನಲ್ಲಿ 2 ಕೋಟಿ ಮೌಲ್ಯದ 4 ಟನ್ ರಕ್ತಚಂದನದ ತುಂಡುಗಳನ್ನು ಸಂಗ್ರಹಿಸಿಡಲಾಗಿತ್ತು. ಹೀಗೆ ಸಂಗ್ರಹಿಸಿಟ್ಟ ರಕ್ತಚಂದನವನ್ನು ಥಾಯ್ಲೆಂಡ್ ಗೆ ಸಾಗಿಸಲು ತಯಾರಿ ನಡೆದಿತ್ತು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಉತ್ತರ ಉಪವಿಭಾಗದ ಪೊಲೀಸರು ಗೋದಾಮಿನ ಮೇಲೆ ದಾಳಿ ನಡೆಸಿ ರಕ್ತ ಚಂದನವನ್ನುವಶಕ್ಕೆ ಪಡೆದಿದ್ದಾರೆ.
ಅಲ್ಲದೇ ಈ ಪ್ರಕರಣದ ಆರೋಪಿಗಳಾದ ಉಳ್ಳಾಲದ ತಬ್ರೇಜ್, ರೋಹಿತ್ ಸೇರಿದಂತೆ ಮೂವರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ ಎನ್ನಲಾಗಿದೆ.
ರಕ್ತಚಂದನವು ದಕ್ಷಿಣ ಭಾರತದ ಪರ್ವತ ವ್ಯಾಪ್ತಿಯ ಸ್ಥಳೀಯ ಸಸ್ಯವಾಗಿದೆ. ದಕ್ಷಿಣ ಭಾರತದಲ್ಲಿ ಅದನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಐಯುಯುಸಿಎನ್ ಸಂಸ್ಥೆಯು ರಕ್ತಚಂದನವನ್ನು ಅಪಾಯಕ್ಕೊಳಗಾದ ಪ್ರಭೇದವಾಗಿ ಪಟ್ಟಿಮಾಡಿದೆ.