ಅಮೇರಿಕಾದ ಖ್ಯಾತ ಗಾಯಕಿ ಮೇರಿ ವಿಲ್ಸನ್ ವಿಧಿವಶ, ಸಂತಾಪ ಸೂಚಿಸಿದ ಜೋ ಬೈಡೆನ್.
ಅಮೇರಿಕಾದ ಖ್ಯಾತ ಗಾಯಕಿ ಮೇರಿ ವಿಲ್ಸನ್ ಅವರು ತಮ್ಮ 76ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದು,ಫೆಬ್ರವರಿ 8ರಂದು ನಿಧನರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ, ಮೇರಿ ವಿಲ್ಸನ್ 6ನೇ ಮಾರ್ಚ್ 1944 ರಂದು ಅಮೇರಿಕಾದ ಗ್ರೀನ್ ವಿಲ್ಲೆ ನಗರದಲ್ಲಿ ಜನಿಸಿದ್ದು,ಸ್ಯಾಮ್ ಹಾಗು ಜಾನಿ ವಿಲ್ಸನ್ ದಂಪತಿಯ ಮೂರು ಜನ ಮಕ್ಕಳಲ್ಲಿ ಇವರು ಮೊದಲಿಗರು,1962ರಲ್ಲಿ ಡೆಟ್ರಾಯ್ಟ್ನ ನಾರ್ಥ್ ಈಸ್ಟ್ ಶಾಲೆಯ ಮುಖಾಂತರ ಪದವಿಯನ್ನು ಪದೆದುಕೊಂಡ ಇವರು,ಶಾಲಾ ದಿನಗಳಲ್ಲಿ ನಡೆಯುತ್ತಿದ್ದ ಸಂಗೀತ ಸ್ಪರ್ಧೆಯಲ್ಲಿಅವರ ಆಸಕ್ತಿ ಹಾಗು ಸಾಮರ್ಥ್ಯ ಹೊರಹೊಮ್ಮುತ್ತದೆ,ಇವರಲ್ಲಿದ್ದ ಅಗಾಧ ಪ್ರತಿಭೆಗೆ ಅಮೇರಿಕಾದ ಸಂಗೀತ ದಿಗ್ಗಜರು ಒಂದು ಕ್ಷಣ ದಿಗ್ಭ್ರಮೆ ಗೊಂಡ್ಡಿದ್ದರು,ನಂತರದ ದಿನಗಳಲ್ಲಿ ಡಯಾನಾ ರೋಸ್ ಹಾಗು ಬೆಟ್ಟಿ ಮೆಕ್ಗ್ಲೋನ್ ಜೊತೆಗೂಡಿ ತಮ್ಮ ಸಂಗೀತದ ಪಯಣವನ್ನು ಆರಂಭಿಸಿ ಹೆಚ್ಚು ಪ್ರಖ್ಯಾತಿ ಪಡೆದರು,ತಮ್ಮ 15ನೇ ವಯಸ್ಸಿನಲ್ಲಿ ಮೇರಿ ʼಸುಪ್ರೀಂʼ ತಂಡವನ್ನುಕಟ್ಟಿದರು, ಅವರ ಪ್ರಮುಖ ಗಾಯನಗಳಲ್ಲಿ "ಕಮ್ ಸೀ ಅಬೌಟ್ ಮೀ" "ಬ್ಯಾಕ್ ಇನ್ ಮೈ ಆರ್ಮ್ಸ್ ಅಗೈನ್" ತುಂಬಾ ಪ್ರಸಿದ್ದಿ ಹೊಂದಿದ ಗಾಯನಗಳು,ಇನ್ನೂ ಹಲವಾರು ಗಾಯನಗಳೊಂದಿಗೆ ಪ್ರಖ್ಯಾತಿ ಪಡೆದಿರುವ ಇವರು,2020ರಲ್ಲಿ ಅಮೇರಿಕಾದ ವಾರ್ತಾ ಪತ್ರಿಕೆಗಳ ಸಂಘದ ವತಿಯಿಂದ "ಜೀವಮಾನದ ಶ್ರೇಷ್ಠ ಸಾಧನೆ" ಎಂಬ ಪ್ರಶ್ತಿಯನ್ನು ಪಡೆದಿದ್ದಾರೆ ಹಾಗು ಅಮೇರಿಕಾದ ಒಹಿಯೊ ರಾಕ್ ಮ್ಯೂಸಿಯಂನ ʼರಾಕ್ ಅಂಡ್ ರೋಲ್ ಹಾಲ್ ಆಫ್ ಫೇಮ್ʼ ಖ್ಯಾತಿಗೂ ಪಾತ್ರರಾಗಿದ್ದಾರೆ.