ಜೈಶ್-ಎ-ಮೊಹಮ್ಮದ್ ಉಗ್ರರಿಂದ ಮೋದಿ ಟಾರ್ಗೆಟ್.......

ದೆಹಲಿ :  ಭಾರತೀಯ ಗುಪ್ತಚರ ಸಂಸ್ಥೆ ಆಘಾತಕಾರಿ ಮಾಹಿತಿಯೊಂದನ್ನು ನೀಡಿದ್ದು, ಪಾಕಿಸ್ತಾನ ಉಗ್ರ ಸಂಘಟನೆ ಜೈಷ್ ಎ ಮೊಹಮ್ಮದ್ ಪ್ರಧಾನಿ ಮೋದಿ ಯನ್ನು ಟಾರ್ಗೆಟ್ ಮಾಡಿರುವುದಾಗಿ ಹೇಳಿದೆ.

 ಇದೇ ಡಿಸೆಂಬರ್ 22 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿರುವ ರ್ಯಾಲಿಯಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, ಇದೇ ರ್ಯಾಲಿಯಲ್ಲಿ ಪ್ರಧಾನಿಯನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ದೆಹಲಿಯಲ್ಲಿರುವ ಅನಧಿಕೃತ ಕಾಲೊನಿಗಳನ್ನು ಅಧಿಕೃತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ  ಹಮ್ಮಿಕೊಂಡಿರೂವ ರ್ಯಾಲಿ ಇದಾಗಿದ್ದು ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 22 ರಂದು ರಂದು ಡಿಸೆಂಬರ್ 22 ರಂದು ರಂದು ನಡೆಯುವ ಈ ರ್ಯಾ
ಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.