ಮುರುಘಾ ಮಠದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಸಜ್ಜು....
ಸೂರ್ಯ ಗ್ರಹಣ ವೀಕ್ಷಣೆ ಹಾಗು ಸಹಪಂಕ್ತಿ ಭೋಜನವನ್ನು 26-12-19 ರಂದು ಬೆಳಗ್ಗೆ 8.17 ರಿಂದ 10.57ರವರೆಗೆ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಮುರುಘಾಮಠದ ಅನುಭವ ಮಂಟಪದ ಮುಂಭಾಗ ಏರ್ಪಡಿಸಲಾಗಿದೆ. ಡಾ.ಶಿವಮೂರ್ತಿ ಮುರುಘಾ ಶರಣರು ಎಲ್ಲಾ ಸಾರ್ವಜನಿಕರನ್ನೂ ಸಹ, ಈ ಅಪರೂಪದ ಕಂಕಣ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳಲು ಆಹ್ವಾನಿಸಿದ್ದಾರೆ.
ವೀಕ್ಷಣೆಗೆ ಟೆಲಿಸ್ಕೋಪ್ ಗಳು, ಸೌರ ಕನ್ನಡಕಗಳು, ಪಿನ್ ಹೋಲ್ ಕ್ಯಾಮರಾಗಳು, ಬಾಲ್ ಮೌಂಟೇಡ್ ಕನ್ನಡಿಗಳು ಮತ್ತು ಕಂಕಣ ಸೂರ್ಯಗ್ರಹಣ ಕಾರ್ಯಮಾದರಿಗಳೊಂದಿಗೆ ಏಕಕಾಲದಲ್ಲಿ ಸುಮಾರು 50 ಜನರು ವೀಕ್ಷಿಸಬಹುದಾದ ಉಪಕರಣಗಳನ್ನು ಮುರುಘಾ ಮಠದಲ್ಲಿ ಸಜ್ಜುಗೊಳಿಸಲಾಗಿದೆ.
ಈ ಬಾರಿಯ ಸೂರ್ಯಗ್ರಹಣ ವಿಶೇಷವಾಗಿ ಗೋಚರಿಸಲಿದ್ದು, ಇದನ್ನು ವೀಕ್ಷಿಸಲು ಆಸಕ್ತಿವುಳ್ಳವರು ಚಿತ್ರದುರ್ಗದ ಮುರುಘಾ ಮಠಕ್ಕೆ ತೆರಳಿ ಅಲ್ಲಿ ಏರ್ಪಡಿಸಿರುವ ಉಪಕರಣಗಳ ಅನುಕೂಲದಿಂದ ಸೂರ್ಯ ಗ್ರಹಣವನ್ನು ನೋಡಬಹುದು.