ನಿಮ್ಮ ಧೈರ್ಯ ನಮಗೆ ಸ್ಪೂರ್ತಿ ಮಹಿಳಾ ಪೊಲೀಸ್ ಕಾರ್ಯಕ್ರಮ.....
ಮಹಿಳೆಯೆಂದರೆ ಬರಿ ಪ್ರೀತಿ,ಮಮಕಾರ, ತ್ಯಾಗದ, ಸಂಕೇತವಲ್ಲ, ಧೈರ್ಯ, ಸಾಹಸದ, ಪ್ರತೀಕವೂ ಹೌದು.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಮಹಿಳಾ ದಿವಸದ ಅಂಗವಾಗಿ "ನಿಮ್ಮ ಧೈರ್ಯ ನಮಗೆ ಸ್ಪೂರ್ತಿ'' ಕಾರ್ಯಕ್ರಮ ಬಹಳ ವಿನೂತನವಾಗಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಮಹಿಳೆಯರು ಪುರುಷರಷ್ಟೇ ಸಮ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾಯಿತು.
ಬೆಂಗಳೂರು ನಗರ ಸಿಟಿ ಪೊಲೀಸ್ ವಲಯದಲ್ಲಿ 20 ಡಿಸಿಪಿಗಳ ಪೈಕಿ 8 ಡಿಸಿಪಿ 2ಎಸಿಪಿ ಮಹಿಳೆ ಆಗಿರುವುದು ಹೆಮ್ಮೆಯ ವಿಷಯ. ಕಿತ್ತೂರಾಣಿ ಚೆನ್ನಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕ, ಕೆಳದಿ ಚೆನ್ನಮ್ಮ, ಇಂತಹ ವೀರವನಿತೆಯರು ಹುಟ್ಟಿದ ನಾಡಿನಲ್ಲಿ.ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಗಳು ದಕ್ಷತೆ ಕಾರ್ಯಕ್ಷಮತೆ ಹಾಗೂ ಸಾಹಸದ ಪ್ರತೀಕವೇ ಮಹಿಳಾ ಪೊಲೀಸ್ ಅಧಿಕಾರಿಗಳು. ಸಂಪೂರ್ಣ ಬೆಂಗಳೂರು ನಗರದ ಸುರಕ್ಷತೆ ಹೊತ್ತಿರುವ ಮಹಿಳಾ ಪೊಲೀಸ್ ಅಧಿಕಾರಿಗಳು. ಮಹಿಳಾ ದಿನದ ಅಂಗವಾಗಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಹಿಳಾ ಡಿಸಿಪಿಗಳು ವಿಭಿನ್ನ 'ಫೋಟೋಶೂಟ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
8 ಡಿಸಿಪಿ.
೧.ಡಾ||ಆರ್. ರೋಹಿಣಿ ಸೆಪಾಟ್ (IPS) ಉಪ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗ, ಬೆಂಗಳೂರು ನಗರ.
೨. ಇಶಾ ಪಂತ್ (IPS) ಉಪ ಪೊಲೀಸ್ ಆಯುಕ್ತರು, ಕಮಾಂಡ್ ಸೆಂಟರ್, ಬೆಂಗಳೂರು ನಗರ.
೩.ನಿಶಾ ಜೇಮ್ಸ್ (IPS) ಉಪ ಪೊಲೀಸ್ ಆಯುಕ್ತರು, ಆಡಳಿತ, ಬೆಂಗಳೂರು ನಗರ.
೪.ದಿವ್ಯಾ ಸಾರಾ ಥಾಮಸ್, (IPS) ಉಪ ಪೊಲೀಸ್ ಆಯುಕ್ತರು, ಹೆಡ್ ಕ್ವಾರ್ಟರ್ಸ್ ಸಿಎಆರ್, ಬೆಂಗಳೂರು ನಗರ.
೫.ಇಲಕ್ಕಿಯಾ ಕರುಣಗರನ್, (IPS) ಉಪ ಪೊಲೀಸ್ ಆಯುಕ್ತರು, ವಿ.ವಿ.ಐ.ಪಿ, ಬೆಂಗಳೂರು ನಗರ.
೬.ಡಾ.ಎಂ.ಅಶ್ವಿನಿ, (IPS) ಉಪ ಪೊಲೀಸ್ ಆಯುಕ್ತರು, ಗುಪ್ತಚರ ಇಲಾಖೆ ಬೆಂಗಳೂರು ನಗರ.
೭.ಡಾ.ಸೌಮಿಯಾಲತಾ ಎಸ್.ಕೆ., (K.S.P.S) ಉಪ ಪೊಲೀಸ್ ಆಯುಕ್ತರು, ಸಂಚಾರ ಪಶ್ಚಿಮ ವಿಭಾಗ, ಬೆಂಗಳೂರು ನಗರ.
೮.ಸಾರಾ ಫಾತಿಮಾ, , (K.S.P.S) ಉಪ ಪೊಲೀಸ್ ಆಯುಕ್ತರು, ಸಂಚಾರ, ಉತ್ತರ ವಿಭಾಗ, ಬೆಂಗಳೂರು ನಗರ.
2 ಎಸಿಪಿ
೧.ತಬರಕ್ ಫಾತಿಮಾ ಸಹಾಯಕ ಪೊಲೀಸ್ ಆಯುಕ್ತರು, ಪುಲಕೇಶಿನಗರ ಉಪವಿಭಾಗ, ಪೂರ್ವ ಬೆಂಗಳೂರು ನಗರ.
೨.ಎಂ.ಸಿ.ಕವಿತಾ ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ನಿರ್ವಹಣಾ ಕೇಂದ್ರ, ಬೆಂಗಳೂರು ಸಿಟಿ.
ಕರ್ನಾಟಕ ಗೃಹ ಇಲಾಖೆಯ ಪ್ರೋತ್ಸಾಹದೊಂದಿಗೆ 'ಗೃಹಮಂತ್ರಿ ಬಸವರಾಜ್ ಬೊಮ್ಮಾಯಿ' ಅವರನ್ನು ಶ್ಲಾಘಿಸಿದರು.
ಮಹಿಳಾ ಅಧಿಕಾರಿಗಳು ಫೋಟೋಗೆ ಫೋಸ್ ಕೊಟ್ಟು ನಾವು ಯಾರಿಗೂ ಕಮ್ಮಿ ಇಲ್ಲ ಎಂದು ಸಾಬೀತುಪಡಿಸಿದರು.