
40,000 ನಕಲಿ ನೋಟ್ ಕಳ್ಳಸಾಗಾಣಿಕೆ
ತ್ರಿಪೂರ: ತ್ರಿಪೂರ ರಾಜ್ಯದಲ್ಲಿ 40,000 ನಕಲಿ ನೋಟುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯಾದ ಜಯಂತ್ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸರ್ಕಾರಿ ನೌಕರನಾಗಿದ್ದು, 2 ಸಾವಿರದ 20 ನಕಲಿ ನೋಟುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಆತನನ್ನು ಸೆಪಾಹಿಜಲ ಜಿಲ್ಲೆಯ ಸೊನಮುರ ಮಾರುಕಟ್ಟೆಯಲ್ಲಿ ಭಾನುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ತ್ರಿಪೂರ ರಾಜ್ಯವು ಬಾಂಗ್ಲಾದೇಶದ ಗಡಿಭಾಗದಲ್ಲಿದ್ದು ನಕಲಿ ನೋಟುಗಳ ಕಳ್ಳಸಾಗಾಣಿಕೆಯ ಮೂಲ ಬಾಂಗ್ಲಾದೇಶವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿರುವುದಾಗಿ ಸೊನಮುರ ಉಪವಿಭಾಗ ಅಧಿಕಾರಿ ಬನೋಜ್ ಬಿಪ್ಲಾಬ್ ದಾಸ್ ಹೇಳಿದ್ದಾರೆ.