ನಾಲ್ಕು ಬಾರಿ ಗೆದ್ದರೂ ಈ ಮಾಜಿ ಶಾಸಕನ ಬದುಕು ಈಗಿನ MLA ಗಳಿಗೆ ಆದರ್ಶ ..!
ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿ MLA ಆಗಬೇಕು ಅಂದರೆ ಅದೂ ಅಷ್ಟು ಸುಲಭದ ಕೆಲಸ ಅಲ್ಲ ಮತ್ತು MLA ಆಗುವುದಕ್ಕೆ ಕೋಟಿಗಟ್ಟಲೆ ಹಣ ಬೇಕು, ಒಂದು ಭಾರಿ MLA ಆದರೆ ಸಾಕು ತಮ್ಮ ಮಕ್ಕಳ ಮತ್ತು ಮೋಮ್ಮಕ್ಕಳ ಬದುಕಿಗೆ ಬೇಕಾಗುವಷ್ಟು ಹಣವನ್ನ ಸಂಪಾದನೆ ಮಾಡುತ್ತಾರೆ ಈಗಿನ ಕಾಲದ MLA ಗಳು. ಇನ್ನು ಈಗಿನ ಕಾಲದ MLA ಗಳು ತನ್ನ ನಂತರ ತನ್ನ ಮನೆಯವರು MLA ಆಗಬೇಕು ಎಂದು ಬಯಸುತ್ತಾರೆ, ಆದರೆ ನಾವು ಹೇಳುವ ಈ ವ್ಯಕ್ತಿ ಸತತ ಐದು ಭಾರಿ MLA ಆದರೂ ಹೇಗೆ ಬದುಕುತ್ತಿದ್ದಾರೆ ಎಂದು ತಿಳಿದರೆ ನೀವು ಒಮ್ಮೆ ಆಶ್ಚರ್ಯ ಪಡುತ್ತೀರಿ, ಹೌದು ಸ್ನೇಹಿತರೆ ಇಂತಹ ವ್ಯಕ್ತಿ ಪ್ರಪಂಚದಲ್ಲಿ ಸಿಗುವುದು ಬಹಳ ಕಡಿಮೆ .
ಸ್ನೇಹಿತರೆ ನಾವು ತೋರಿಸುತ್ತಿರುವ ಈ ವ್ಯಕ್ತಿಯ ಹೆಸರು ಗುಮ್ಮಡಿ ನರಸಯ್ಯ, ಇವರು ತೆಲಂಗಾಣ ರಾಜ್ಯದ ಖಮ್ಮಮ್ ಜಿಲ್ಲೆಯ ಎಲ್ಲಂದು ಕ್ಷೇತ್ರದಲ್ಲಿ ಅಡಿಯೂ ಭಾರಿ MLA ಆಗಿ ಗೆದ್ದು ಜನರಿಗೆ ಸೇವೆಯನ್ನ ಸಲ್ಲಿಸಿರುವ ಮಹಾನ್ ವ್ಯಕ್ತಿ. ಇವರು MLA ಆಗಿದ್ದಾಗ ಕೋಟಿಗಟ್ಟಲೆ ಹಣವನ್ನ ಸಂಪಾದನೆ ಮಾಡುವ ಅವಕಾಶ ಇದ್ದರೂ ಕೂಡ MLA ನರಸಯ್ಯನವರು ನನಗೆ ಹಣ ಬೇಡ ಜನರ ಪ್ರೀತಿ ಬೇಕು ಎಂದು 25 ವರ್ಷ ಅಧಿಕಾರದಲ್ಲಿ ಇದ್ದರೂ ಕೂಡ ಒಂದೇ ಒಂದು ರೂಪಾಯಿಯನ್ನ ಕೆಟ್ಟ ದಾರಿಯಲ್ಲಿ ಸಂಪಾದನೆ ಮಾಡಿದವರಲ್ಲ ಈ MLA ನರಸಯ್ಯ ನವರು. ಇನ್ನು MLA ನರಸಯ್ಯನವರು ಈಗಲೂ ತಮ್ಮ ಹಳೆಯ ಮನೆಯಲ್ಲಿ ವಾಸವಿದ್ದಾರೆ ಮತ್ತು ಅವರು ಎಲ್ಲಾದರೂ ಹೋಗಬೇಕು ಅಂದರೆ ಬಸ್ ಸ್ಟಾಂಡ್ ನಲ್ಲಿ ನಿಂತು ಬಸ್ ಹತ್ತಿಕೊಂಡು ಹೋಗುತ್ತಾರೆ.
ಸರ್ಕಾರದ ಹಣದಿಂದ ಅಣ್ಣ ಸ್ವಂತ ಉಪಯೋಗಕ್ಕೆ ಯಾವುದೇ ವಾಹನವನ್ನ ಖರೀದಿ ಮಾಡದ ನರಸಯ್ಯನವರು ಈಗಲೂ ಕೂಡ ತಮ್ಮ ಹಳೆಯ ಸೈಕಲ್ ನ್ನ ತುಳಿಯುತ್ತಿದ್ದಾರೆ. ಹೀಗೆ ಒಂದು ದಿನ ನರಸಯ್ಯನವರು ಸೈಕಲ್ ತಳ್ಳಿಕೊಂಡು ಹೋಗುತ್ತಿದ್ದಾಗ ಹಿಂದೆ ಇಂದ ಬಂದ ಬೈಕ್ ಸವಾರ ಅವರ ಬಗ್ಗೆ ತಿಳಿಯದೆ ಹೇ ಮುದುಕ ಪಕ್ಕಕ್ಕೆ ಸರಿ ಎಂದು ಹೇಳಿ ಹೋಗುತ್ತಾನೆ, ಈ ಸಮಯದಲ್ಲಿ ಒಂದು ಚೂರು ಕೋಪ ಮಾಡಿಕೊಳ್ಳದ ನರಸಯ್ಯ ವಿನಯಪೂರ್ವಕವಾಗಿ ಆಯಿತು ಹೋಗು ತಮ್ಮ ಎಂದು ಹೇಳಿದ್ದಾರೆ. ಹೀಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತಿದ್ದಾರೆ MLA ನರಸಯ್ಯ, ಇವರ ಹಾಗೆ ಎಲ್ಲಾ MLA ಮತ್ತು ರಾಜಕೀಯ ವ್ಯಕ್ತಿಗಳು ಇದ್ದಿದ್ದರೆ ನಮ್ಮ ದೇಶ ಎಷ್ಟು ಮುಂದುವರೆಯುತ್ತಿತ್ತು ಅಲ್ಲವೇ.