10ರೂ. ನಾಣ್ಯ ನೀಡಿದ್ರೆ 10% ರಿಯಾಯಿತಿ..!
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಹೊಟೆಲ್ ನಿಸರ್ಗ ಗ್ರಾಂಡ್, 10ರೂ ನಾಣ್ಯಗಳನ್ನು ನೀಡಿ ಬಿಲ್ ಪಾವತಿಸುವ ಗ್ರಾಹಕರಿಗೆ 10% ರಿಯಾಯಿತಿಯನ್ನು ನೀಡುತ್ತಿದೆ. ಇತ್ತಿಚೀಗೆ 10ರೂ ನಾಣ್ಯ ಚಲಾವಣೆಯಲ್ಲಿಲ್ಲ ಎಂಬ ಗಾಳಿ ಸುದ್ದಿ ಎಲ್ಲೆಡೆ ಹರದಾಡುತ್ತಿರುವ ನಿಟ್ಟಿನಲ್ಲಿ ಗ್ರಾಹಕರು ಮತ್ತು ವ್ಯಾಪಾರಸ್ಥರಲ್ಲಿ ಅರಿವನ್ನು ಮೂಡಿಸುವ ಸಲುವಾಗಿ ಈ ರೀತಿಯ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಹೊಟೆಲ್ ಮಾಲೀಕರಾದ ಕೃಷ್ಣ ರಾಜ್.
ಬೆಂಗಳೂರಿನ ನೃಪತುಂಗ ನಗರದ YMCA ಕಂಪೌಂಡ್‌ನಲ್ಲಿರುವ ಹೊಟೆಲ್ ನಿಸರ್ಗ ಗ್ರಾಂಡ್, ಅಕ್ಟೋಬರ್ 1 ರಿಂದ 10ರೂ ನಾಣ್ಯಗಳನ್ನು ಕೊಟ್ಟು ಬಿಲ್ ಪಾವತಿಸುವ ಗ್ರಾಹಕರಿಗೆ ೧೦% ರಿಯಾಯಿತಿಯನ್ನು ನೀಡುತ್ತಿದೆ. ರಿಸರ್ವ ಬ್ಯಾಂಕಿನ ಅಧಿಕೃತ ಆದೇಶದ ಹೊರತಾಗಿಯೂ ೧೦ರೂ ನಾಣ್ಯಗಳು ಚಲಾವಣೆಯಲ್ಲಿಲ್ಲ ಎಂಬ ಗಾಳಿ ಸುದ್ದಿ ಎಲ್ಲೆಡೆ ಹರಡಿದ್ದರಿಂದ ಅನೇಕ ವ್ಯಾಪಾರಸ್ಥರು ಗ್ರಾಹಕರಿಂದ 10ರೂ ನಾಣ್ಯಗಳ ಪಡೆಯಲು ಹಿಂದೇಟು ಹಾಕುತ್ತಿದ್ದರು.
ಗ್ರಾಹಕರು ಮತ್ತು ವ್ಯಾಪಾರಸ್ಥರಲ್ಲಿ ೧೦ರೂ ನಾಣ್ಯಗಳು ಚಲಾವಣೆಯಲ್ಲಿರುವುದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ರೀತಿಯ ವಿಶೇಷ ಆಫರ್ ನೀಡಿದ್ದೇವೆ ಅಲ್ಲದೆ ಆರ್‌ಬಿಆಯ್ 10 ರೂಪಾಯಿಯ ನೋಟುಗಳ ಮುದ್ರಣದ ಸಂಖ್ಯೆಯನ್ನು ಕಡಿಮೆ ಮಾಡಿದೆ ಮತ್ತು ವ್ಯಾಪಾರಸ್ಥರು ಕೂಡ 10 ರೂ ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿರುವದರಿಂದ ಗ್ರಾಹಕರು ತಂಬಾ ಕಷ್ಟ ಪಡುತ್ತಿದ್ದಾರೆ ಎಂದು ಹೊಟೆಲ್ ಮಾಲೀಕರಾದ ಕೃಷ್ಣ ರಾಜ್ ಹೇಳಿದ್ದಾರೆ. ಈ ನಮ್ಮ ಪ್ರಯತ್ನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು ಹೆಚ್ಚೆಚ್ಚು ಜನರು ಬಿಲ್ ಪಾವತಿಸಲು 10ರೂ ನಾಣ್ಯಗಳನ್ನು ಬಳಸುತ್ತಿದ್ದಾರೆ ಮತ್ತು ಬೆಂಗಳೂರಿನ ಮಿಡ್-ಸೈಜ್ ಹೊಟೆಲ್ ಒಂದರಲ್ಲಿ ಸರಾಸರಿ ದಿನಕ್ಕೆ 50,000 10ರೂಪಾಯಿ ನೋಟುಗಳು ಅಥವಾ ನಾಣ್ಯಗಳು ಬಳಕೆಯಾಗುತ್ತವೆ. ಗ್ರಾಹಕರೂ ಮತ್ತು ವ್ಯಾಪಾರಸ್ಥರಲ್ಲಿ ೧೦ರೂಪಾಯಿ ನೋಟುಗಳ ಕೊರತೆ ಇರುವುದರಿಂದ ಈ ರೀತಿಯ ಕಾರ್ಯವನ್ನು ಮಾಡುತ್ತಿರುವುದಾಗಿ ಕೃಷ್ಣ ರಾಜ್ ತಿಳಿಸಿದ್ದಾರೆ.
ಕಳೆದ 25 ವರ್ಷಗಳಿಂದ ತೃಪ್ತಿ ಹೊಟೆಲ್ ಎಂಬ ಹೆಸರಿನಿಂದ ಪ್ರಸಿದ್ದಿ ಪಡೆದಿದ್ದ ಹೋಟೆಲ್‌ನ್ನು 4 ವರ್ಷಗಳ ಹಿಂದೆ ಕೃಷ್ಣ ರಾಜ್ ಖರಿದಿಸಿದ್ದರು. ಈಗ ಅನೆಕ ನ್ಯಾಯಾಲಯಗಳು, ಅಸ್ಪತ್ರೆಗಳು, ಸರಕಾರಿ ಕಚೇರಿಗಳು ಮತ್ತು ಕಾಲೇಜುಗಳು ಹತ್ತಿರವಿರುವದರಿಂದ ಎಲ್ಲ ರೀತಿಯ ಗ್ರಾಹಕರು ಕೂಡ ಈ ಹೊಟೆಲಿನ ಗ್ರಾಹಕರಾಗಿದ್ದಾರೆ. ಗ್ರಾಹಕರೊಬ್ಬರು ಈ ಆಫರ್ ನೊಡಿದ ಕೂಡಲೆ ಮನೆಗೆ ಹೊಗಿ 70 ಹತ್ತು ರೂಪಾಯಿಯ ನಾಣ್ಯಗಳನ್ನು ತಂದು ಹೊಟೆಲಿನಲ್ಲಿ ಉಟ ಮಾಡಿ ಬಿಲ್ ಪಾವತಿಸಿದರು ಎಂದು ರಾಜ್ ತಿಳಿಸಿದ್ದಾರೆ. ಹೀಗೆ ದಿನಕ್ಕೆ ಸುಮಾರು 2500 ನಾಣ್ಯಗಳು ಸಂಗ್ರಹವಾಗುತ್ತಿವೆ ಮತ್ತು ಸದ್ಯದ ಮಟ್ಟಿಗೆ ಸಂಗ್ರಹವಾದ ನಾಣ್ಯಗಳನ್ನು ಗ್ರಾಹಕರಿಗೆ ಹಿಂತಿರಿಗಿಸದೆ ಅಥವಾ ಬ್ಯಾಂಕಿಗಳಿಗೆ ಸಂದಾಯ ಮಾಡದೆ ತಮ್ಮಲ್ಲೆ ಉಳಿಸಿಕೊಂಡ್ದಿದ್ದಾರೆ ರಾಜ್. 10 ರೂಪಾಯಿ ನಾಣ್ಯಗಳ ಮೂಲಕ ವ್ಯವಹರಿಸಲು ಜನರು ಆರಂಭ ಮಾಡಿದ ಕೂಡಲೆ ಗ್ರಾಹಕರು ಕೂಡ ನಮ್ಮಿಂದ 10ರೂ ನಾಣ್ಯಗಳನ್ನು ಯಾವುದೇ ತಕರಾರಿಲ್ಲದೆ ಸ್ವಿಕರಿಸುತ್ತಾರೆ ಎಂದು ರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೂ ರಾಜ್ ಅವರ ಈ ಕಾರ್ಯವನ್ನು ಬಿಬಿಎಂಪಿ ಕಮಿಷನರ್ ಶ್ಲಾಘಿಸಿದ್ದಾರೆ. ಬೆಂಗಳೂರು ದಕ್ಷಿಣ ಲೊಕಸಭಾ ಶಾಸಕರಾದ ತೇಜಸ್ವಿ ಸೂರ್ಯ ಕೂಡ ರಾಜ್ ರವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು ತಮ್ಮ ಬಿಲ್‌ನ್ನು ಕೂಡ 10ರೂಪಾಯಿ ನಾಣ್ಯಗಳನ್ನು ನಿಡುವುದರ ಮೂಲಕ ಪಾವತಿಸಿದ್ದಾರೆ.
ವರದಿ: ಮಂಜುನಾಥ ನಾಯಕ್