ಚೈನಾ ಮ್ಯಾನ್ ಕುಲದೀಪ್ ಯಾದವ್ ವಿಶೇಷ ದಾಖಲೆ...!
ಚೈನಾ ಮ್ಯಾನ್ ಕುಲದೀಪ್ ಯಾದವ್ ವಿಶೇಷ ದಾಖಲೆ...!
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2 ನೇ ಏಕದಿನ ಪಂದ್ಯದ ವೇಳೆಯಲ್ಲಿ ಚೈನಾಮ್ಯಾನ್ ಬೌಲರ್ ಕುಲದೀಪ್ ಯಾದವ್ ವಿಶೇಷ ದಾಖಲೆ ಬರೆದಿದ್ದಾರೆ.
ನಿನ್ನೆ ರಾಜ್ಕೋಟ್ ಅಂಗಳದಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಅವರನ್ನ ಔಟ್ ಮಾಡುವ ಮೂಲಕ ಕುಲದೀಪ್ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 100 ವಿಕೆಟ್ ಕಬಳಿಸಿ ದಾಖಲೆ ಬರೆದರು. ಈ ಮೂಲಕ ಭಾರತದ ಬೌಲರ್ ಗಳ ಪಟ್ಟಿಯಲ್ಲಿ ಕಡಿಮೆ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು.
ಭಾರತದ ಆಟಗಾರರ ಪೈಕಿ ಅತಿವೇಗವಾಗಿ ವಿಕೆಟ್ ಕಬಳಿಸಿದ ವಿಭಾಗದಲ್ಲಿ 56 ಪಂದ್ಯಗಳಲ್ಲಿ ಮೊಹಮ್ಮದ್ ಶಮಿ 100 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿ 57 ಪಂದ್ಯಗಳನ್ನ ಆಡಿ ಜಸ್‌ಪ್ರೀತ್ ಬೂಮ್ರಾ ಈ ಸಾಧನೆ ಮಾಡಿದ್ದರು. ಈಗ ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ ನಂತರ 3ನೇ ಸ್ಥಾನವನ್ನು ಕುಲದೀಪ್ ಯಾದವ್ ಅಲಂಕರಸಿದ್ದಾರೆ.