ಕೌಟುಂಬಿಕ ಕಲಹ ನೇಣಿಗೆ ಶರಣಾದ ಶಾಲಾ ಶಿಕ್ಷಕಿ

ರಾಯಚೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ಶಾಲಾ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನ ಮಾನ್ವಿಯಲ್ಲಿ ನಡೆದಿದೆ. 33 ವರ್ಷದ ಶಾಲಿನಿ ಮೃತ ದುರ್ದೈವಿ. ಮಾನ್ವಿಯ ನಸ್ಲಾಪೂರು ಗ್ರಾಮದ ಶಿಕ್ಷಕಿಯಾಗಿರುವ ಶಾಲಿನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತಿ ಮೋಹನ್ ತಾಲೂಕಿನ ಕೊರವಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದಾನೆ. ಕಳೆದ ಒಂಬತ್ತು ವರ್ಷಗಳಿಂದ ದಂಪತಿ ಮಾನ್ವಿಯಲ್ಲಿ ಮನೆ ಮಾಡಿಕೊಂಡಿದ್ದರು.
 

ಘಟನೆ ಹಿನ್ನೆಲೆ ಶಾಲಿನಿ ತಂದೆ ಲಕ್ಷ್ಮಿಪುತ್ರಯ್ಯ ಮಗಳ ಸಾವಿಗೆ ಮೋಹನ್ ಹಾಗೂ ಅವನ ತಾಯಿ ತಂಗಿಯೇ ಕಾರಣ ಅಂತ ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಗಳಿಗೆ ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಿದ್ದರು, ಅಳಿಯ ಮೋಹನ್ ಗೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು ಅಂತ ಆರೋಪಿಸಿದ್ದಾರೆ. ಮೋಹನ್ ತಾನು ದುಡಿದ ದುಡ್ಡನ್ನೆಲ್ಲಾ ತಾಯಿ-ತಂಗಿಗೆ ಕೊಡುತ್ತಿದ್ದ, ಮಗಳಿಗೆ ಮೊದಲಿನಿಂದಲೂ ಹಿಂಸೆ ಕೊಡುತ್ತಿದ್ದರು ಅಂತ ಮತೃಳ ತಂದೆ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಾನ್ವಿ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.