2.jpeg)
ರಾಹುಲ್ ಗಾಂಧಿಯನ್ನು "ಟ್ಯೂಬ್ ಲೈಟ್" ಎಂದ ಪ್ರಧಾನಿ ಮೋದಿ....
ನವ ದೆಹಲಿ : ಲೋಕಸಭೆಯಲ್ಲಿ ಗುರುವಾರ ಮಾತನಾಡಿದ ನರೇಂದ್ರ ಮೋದಿ ವಿಪಕ್ಷಗಳ ನಾಯಕರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಒಂದು ಹಂತದಲ್ಲಿ ರಾಹುಲ್ ಗಾಂಧಿ ಅವರನ್ನು ಮೋದಿ ಟ್ಯೂಬ್ ಲೈಟ್ ಎಂದು ಕರೆದರು. ನನ್ನ ಭಾಷಣಕ್ಕೆ ಪ್ರತಿಕ್ರಿಯಿಸಲು ಅವರಿಗೆ 30-40 ನಿಮಿಷಗಳು ಬೇಕಾಯಿತು ಎಂದರು.
ಇನ್ನು ಹಾಸ್ಯಮಯ ಧಾಟಿಯಲ್ಲೇ ತಮ್ಮ ಭಾಷಣದ ಉದ್ದಕ್ಕೂ ರಾಹುಲ್ ಗಾಂಧಿಯನ್ನು ಪರೋಕ್ಷವಾಗಿ ಟೀಕಿಸಿದರು. ರಾಹುಲ್ ಗಾಂಧಿಯವರು ನಿರೂದ್ಯೋಗದ ಕುರಿತು ಪ್ರಶ್ನೆ ಕೇಳಲು 30 ನಿಮಿಷ ಬೇಕಾಯಿತು. ನನ್ನ ಮಾತಿನ ಮೂಲಕ ವಿದ್ಯುತ್ ತಲುಪಲು ಅವರಿಗೆ ಬಹಳ ಸಮಯ ಬೇಕಾಯಿತು.ಕೆಲವೊಂದು ಟ್ಯೂಬ್ ಲೈಟ್ ಗಳು ಹೀಗಿರುತ್ತವೆ ಎಂದು ಹೇಳಿದರು.
ಇನ್ನು ರಾಹುಲ್ ಗಾಂಧಿಯವರ ನಿರುದ್ಯೋಗದ ಪ್ರಶ್ನೆಗೆ ಉತ್ತರಿಸಿದ ಮೋದಿ, ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಬಹುದು.ಆದರೆ, ನಿಮ್ಮ ಪಕ್ಷದಲ್ಲಿನ ನಿರುದ್ಯೋಗವನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.