ಶ್ರೇಯಸ್ ಗೋಪಾಲ್ ಕರ್ನಾಟಕ ತಂಡದ ನೂತನ ನಾಯಕನಾಗಿ ಆಯ್ಕೆ


ಕರ್ನಾಟಕ ತಂಡದ ನಾಯಕ ಕರುಣ್  ವಿವಾಹ ಬಂಧನಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ  ಜ.11ರಿಂದ 14ರವರೆಗೆ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಸೌರಾಷ್ಟ್ರ ವಿರುದ್ಧದ ಕರ್ನಾಟಕ ರಣಜಿ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಕರ್ನಾಟಕ ತಂಡದ ಉಪನಾಯಕ ಅನುಭವಿ ಲೆಗ್‌ ಸ್ಪಿನ್ನರ್‌ ಶ್ರೇಯಸ್ ಗೋಪಾಲ್ ಈ ಪಂದ್ಯಕ್ಕೆ ಕರ್ನಾಟಕ ತಂಡದ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ.

ಕರ್ನಾಟಕ ತಂಡ ಪ್ರಸಕ್ತ ಸಾಲಿನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಗೆಲುವು  ಡ್ರಾ ಸಾಧಿಸಿ 16 ಅಂಕಗಳನ್ನು ಹೊಂದಿರುವ ಕರ್ನಾಟಕ, ಸೌರಾಷ್ಟ್ರವಲ್ಲದೆ, ಲೀಗ್ ಹಂತದಲ್ಲಿ ರೈಲ್ವೇಸ್, ಮಧ್ಯಪ್ರದೇಶ ಮತ್ತು ಬರೋಡಾ ತಂಡಗಳನ್ನು ಎದುರಿಸಬೇಕಿದೆ. ಹುಬ್ಬಳ್ಳಿಯಲ್ಲಿ ಉತ್ತರ ಪ್ರದೇಶ ವಿರುದ್ಧ ಇನಿಂಗ್ಸ್‌ ಮುನ್ನಡೆಯೊಂದಿಗೆ ಡ್ರಾ ಮಾಡಿಕೊಂಡ ಕರ್ನಾಟಕ ತಂಡ, ಬಳಿಕ ಮೈಸೂರಿನಲ್ಲಿ ಹಿಮಾಚಲ ಪ್ರದೇಶ ವಿರುದ್ಧ ಸೋಲಿನ ಸುಳಿಯಿಂದ ಪಾರಾಗಿ ಇನಿಂಗ್ಸ್‌ ಹಿನ್ನಡೆಯಲ್ಲಿ ಡ್ರಾ ಸಾಧಿಸಿತು. ಆದರೆ ಇದಕ್ಕೂ ಮುನ್ನ ಬಲಿಷ್ಠ ತಮಿಳುನಾತು ವಿರುದ್ಧ ಜಯ ದಾಖಲಿಸಿತ್ತು. ಇದೀಗ ತನ್ನ ಹಿಂದಿನ ಪಂದ್ಯದಲ್ಲಿ 41 ಬಾರಿಯ ಚಾಂಪಿಯನ್ಸ್‌ ಮುಂಬೈ ತಂಡವನ್ನು ಬಗ್ಗುಬಡಿದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.