
ಗೌಳಿ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ
-ಅಭಿಜ್ಞಾ.ಕೆ
ಫೆಬ್ರವರಿ 2ರಂದು ಚಾಮರಾಜ ಪೇಟೆಯ ಕಲಾವಿದರ ಸಂಘದಲ್ಲಿ ಶ್ರೀನಗರ ಕಿಟ್ಟಿ ಅಭಿನಯದ 'ಗೌಳಿ' ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು.
ಅತಿಥಿಗಳಾಗಿ ನಟ ಗೋಲ್ಡನ್ ಸ್ಟಾರ್ ಗಣೇಶ್, ಲವ್ಲಿ ಸ್ಟಾರ್ ಪ್ರೇಮ್, ಸಲಗ ದುನಿಯಾ ವಿಜಯ್, ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರವರು ಆಗಮಿಸಿ ತಮ್ಮ ಗೆಳೆಯನಿಗೆ ಶುಭ ಹಾರೈಸಿದರು.
ಸುಮಾರು ಮೂರು ವರ್ಷಗಳ ನಂತರ ಕಿಟ್ಟಿಯವರು ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ತಾ ಇದ್ದು, ಒಂದು ವಿಭಿನ್ನ ರಗಡ್, ಮಾಸ್ ಗೆಟಪ್ ನಲ್ಲಿ ನಮ್ಮ ಮುಂದೆ ಬರಲಿದ್ದಾರೆ. ರಘು ಸಿಂಗಂ ರವರ ನಿರ್ಮಾಣದಡಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಸೂರಾ ಅವರು ಆಕ್ಷನ್ ಕಟ್ ಹೇಳಿದ್ದಾರೆ.
ಈ ಹಿಂದೆ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಅದೇ ಸಿನಿಮಾದ ಟೀಸರ್ ಹೊರಬಂದಿದ್ದು ಮತ್ತೊಮ್ಮೆ ಪ್ರೇಕ್ಷಕರಲ್ಲಿ ಕುತೂಹಲವನ್ನುಂಟು ಮಾಡಿದೆ.
ಇದೊಂದು ನೃಜ ಘಟನೆಯಾಧಾರಿತ ಆಕ್ಷನ್- ಥ್ರಿಲ್ಲರ್ ಚಿತ್ರವಾಗಿದ್ದು ಪ್ರೇಕ್ಷಕರನ್ನು ರಂಜಿಸಲು ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಯವರ ಅದ್ಭುತ ಸಂಗೀತ ನಿರ್ದೇಶನವಿದ್ದು, ಮುಖ್ಯ ಪಾತ್ರದಲ್ಲಿ ಶ್ರೀನಗರ ಕಿಟ್ಟಿ, ನಟಿ ಪಾವನಾ ಗೌಡ, ರಂಗಾಯಣ ರಘು, ಶರತ್ ಲೋಹಿತಾಶ್ವ, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ ಮುಂತಾದವರು ಬಣ್ಣ ಹಚ್ಚಿದ್ದಾರೆ.