ಮಣ್ಣಿನ ಪಾತ್ರೆಯಲ್ಲಿ ಮಾಡುವ ಅಡುಗೆ ಆರೋಗ್ಯಕ್ಕೆ ಹಿತಕರ...

ಪುರಾತನ ಕಾಲದಿಂದಲೂ ಮಣ್ಣಿನಿಂದ ಮಾಡಿದ ಮಡಿಕೆಯಲ್ಲಿ ಅಡುಗೆ ಮಾಡುವುದು ಹಲವೆಡೆ ರೂಢಿಯಲ್ಲಿದೆ. ಮಡಿಕೆ ಅಥವಾ ಮಣ್ಣಿನ ಪಾತ್ರೆಯಲ್ಲಿ ಮಾಡಿರುವ ಅಡುಗೆಯ ರುಚಿಯೇ ಬೇರೆ; ಈ ಅಡುಗೆಯು ರುಚಿಗೆ ಮಾತ್ರ ಸೀಮಿತವಲ್ಲದೆ ಉತ್ತಮ ಆರೋಗ್ಯವನ್ನು ನಮಗೆ ನೀಡುತ್ತದೆ.

ಮಣ್ಣಿನ ಪಾತ್ರೆಯ ವಿಶೇಷತೆ ಏನೆಂದರೆ, ಬೇರೆ ಪಾತ್ರೆಗಳಲ್ಲಿ ಅಡುಗೆಗೆ ಬಳಸುವ ಎಣ್ಣೆಯ ಪ್ರಮಾಣಕ್ಕಿಂತ ಕಡಿಮೆ ಎಣ್ಣೆ ಸಾಕಾಗುತ್ತದೆ. ಹಾಗಾಗಿ, ಅನಗತ್ಯ ಕೊಬ್ಬು ದೇಹಕ್ಕೆ ಹೋಗುವುದನ್ನು ತಡೆಯಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಮಣ್ಣಿನ ಪಾತ್ರೆಯಲ್ಲಿ ಮಾಡುವ ಅಡುಗೆಯಿಂದಾಗಿ ನಮ್ಮ ಆರೋಗ್ಯಕ್ಕೆ ಆಗುವ ಹಲವು ಪ್ರಯೋಜನಗಳು ಈ ಕೆಳಗಿನಂತಿವೆ: 

1 ಮಣ್ಣಿನ ಪಾತ್ರೆಯಲ್ಲಿ ಮಾಡಿದ ಆಹಾರ ಧೀರ್ಘಕಾಲ ಬಿಸಿಯಾಗಿಯೂ ರುಚಿಕರವಾಗಿಯೂ ಇರುತ್ತದೆ.

2 ಮಣ್ಣಿನ ಪಾತ್ರೆಗಳಲ್ಲಿ ಔಷಧೀಯ ಗುಣಗಳಿರುವುದರಿಂದ ರುಚಿ ಮತ್ತು ಆರೋಗ್ಯಕ್ಕೆ ಸಹಕಾರಿ.

3 ಅಸಿಡಿಟಿ ಸಮಸ್ಯೆ ಇದ್ದವರು ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ಸೇವಿಸುವುದರಿಂದ ಈ ಸಮಸ್ಯೆಯಿಂದ ದೂರ ಉಳಿಯಬಹುದು.

4 ಬೇರೆ ಅಡುಗೆ ಪಾತ್ರೆಗಳಿಗೆ ಹೋಲಿಸಿದರೆ ಮಣ್ಣಿನಿಂದ ಮಾಡಿದ ಪಾತ್ರೆಗಳು ಅಗ್ಗದಲ್ಲಿ ದೊರೆಯುತ್ತದೆ.

5 ದೇಹದ ಜೀರ್ಣ ಕ್ರಿಯೆಯನ್ನು ಸಮರ್ಪಕವಾಗಿಸಲು ಮಣ್ಣಿನ ಪಾತ್ರೆಯ ಆಹಾರ ಸಹಕಾರಿ. ಇದು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸಲು ಪ್ರಮುಖ ಪಾತ್ರವಹಿಸುತ್ತವೆ.

6 ಅಂದ ಹಾಗೆ ಹೊಳಿಪಿನ ಮಿಶ್ರಣ ತಯಾರಿಸಲು ಹಲವು ಬಗೆಯ ರಾಸಾಯನಿಕ ವಸ್ತುಗಳನ್ನು ಬಳಸಿ ಮಡಿಕೆ ಮಾಡುವವರೂ ಸಹ ಇದ್ದಾರೆ. ಹೆಚ್ಚಿನ ಹೊಳೆಯುವ ಬಣ್ಣದಲ್ಲಿ ಸೀಸದಂಶ ಇರುತ್ತದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಸಿಗುವ ಮಣ್ಣಿನ ಪಾತ್ರೆಯನ್ನು ಸರಿಯಾಗಿ ನೋಡಿ ಕೊಂಡುಕೊಳ್ಳುವುದು ಉತ್ತಮ.