ಇನ್ನು ಕಡಿಮೆಯಾಗದ ಕೊರೊನ ವೈರಾಣು.
ಕೊರೊನ ಸೋಂಕಿಗೆ ದಿನದಿಂದ ದಿನಕ್ಕೆ ಬಲಿಯಾಗುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ.ಸುಮಾರು 563 ಜನ ಕೊರೊನ ಸೋಂಕಿಗೆ ಬಲಿಯಾಗಿದರೆ. 83 ಜನ ಮಂಗಳವಾರ ಮೃತಪಟ್ಟಿದ್ದರೆ.ಹಾಗೂ ಕೊರೊನ ವೈರಾಣು ಸೋಂಕಿತರ ಸಂಖ್ಯೆ 28,018 ಕ್ಕೆ ಮುಟ್ಟಿದೆ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ವರದಿಯ ಪ್ರಕಾರ 892 ಜನ ಕೊರೊನ ಸೋಂಕಿನಿಂದ ಬಳಲುತ್ತಿದವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
3,877 ಜನರು ಹೊಸ ಸೋಂಕಿಗೆ ಪತ್ತೆಯಾಗಿದ್ದಾರೆ.
ನವ ಜಾತ ಶಿಶು ಹುಟ್ಟಿದ 30 ಗಂಟೆಗಳಲ್ಲಿ ಕೊರೊನ ವೈರಾಣು ಹರಡಿದ ಘಟನೆ ಚೀನಾದ ವುಹನ್ ನಗರದ ಆಸ್ಪತ್ರೆಯಲ್ಲಿ ನೆಡೆದಿದೆ.ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನಿಡಲಾಗುತ್ತಿದೆ.
ಇನ್ನು ಕೊರೊನ ಸೋಂಕಿಗೆ ಲಸಿಕೆಯನ್ನು ಕಂಡುಹಿಡಿಯಲು ವಿಶ್ವದ ಹೆಸರಾಂತ ಶ್ರೀ ಮಂತರಲ್ಲಿ ಒಬ್ಬರಾದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಅವರ ಪತ್ನಿ ಮಿಲಿಂಡಾ 711 ಕೋಟಿ ಹಣವನ್ನು ಆರೋಗ್ಯ ಸಂಸ್ಥೆ ಗೆ ನೀಡಿದ್ದರೆ.