ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಪೇಟಿಎಂ....!!!
Paytm ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್‌ಗಳ ಮೂಲಕ ವಾಲೆಟ್‌ಗೆ ಹಣವನ್ನು ಸೇರಿಸಲು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಕಂಪನಿಯ ವೆಬ್‌ಸೈಟ್ ಮಾಹಿತಿ ನೀಡಿದೆ. ಪೇಟಿಎಂನಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಗ್ರಾಹಕರು ತಿಂಗಳಿಗೆ 10,000 ರೂ.ಗಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ವಹಿವಾಟಿಗೆ ಶೇಕಡಾ 1.75 + ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ವಿಶೇಷವೆಂದರೆ, ವಹಿವಾಟಿನ ಮೌಲ್ಯ ಅಥವಾ ಮೊತ್ತವು 10,000 ರೂ.ಗಿಂತ ಕಡಿಮೆಯಿದ್ದರೆ ಗ್ರಾಹಕರು ಹೆಚ್ಚುವರಿಯಾಗಿ ಏನನ್ನೂ ಪಾವತಿಸಬೇಕಾಗಿಲ್ಲ.
ಹೊಸ ಶುಲ್ಕಗಳನ್ನು Paytm ವೆಬ್‌ಸೈಟ್‌ನಲ್ಲಿ ನವೀಕರಿಸಲಾಗಿದೆ. ಈ ಶುಲ್ಕ ಜನವರಿ 1, 2020 ರಂದು ಅಥವಾ ನಂತರ ಮಾಡಿದ ಎಲ್ಲಾ ವಹಿವಾಟುಗಳಿಗೆ ಅನ್ವಯಿಸುತ್ತದೆ. , ಕಂಪನಿಯು ಅದನ್ನು ದೃಡೀಕರಿಸುವ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಒಂದು ವೇಳೆ ನೀವು ಈ ಹೆಚ್ಚುವರಿ ಮೊತ್ತವನ್ನು ಪಾವತಿಸದಿರಲು ಬಯಸಿದರೆ, ನೀವು ಡೆಬಿಟ್ ಕಾರ್ಡ್‌ಗಳು, ಯುಪಿಐ, ನೆಟ್‌ಬ್ಯಾಂಕಿಂಗ್ ಮತ್ತು ಇತರ ವಾಲೆಟ್‌ಗಳ ಮೂಲಕ ಪೇಟಿಎಂ ವಾಲೆಟ್‌ಗೆ ಹಣವನ್ನು ಸೇರಿಸಬೇಕು. Paytm ತನ್ನ ಗ್ರಾಹಕರೊಬ್ಬರಿಗೆ ಟ್ವೀಟ್ ಮೂಲಕ ಇದನ್ನು ಧೃಡ ಪಡಿಸಿದೆ.
ಯಾವುದೇ ಶುಲ್ಕವಿಲ್ಲದೆ ನಿಮ್ಮ ವಾಲೆಟ್‌ಗೆ ಹಣವನ್ನು ಸೇರಿಸಲು, ಯುಪಿಐ ಅಥವಾ ಡೆಬಿಟ್ ಕಾರ್ಡ್‌ನಂತಹ ಇತರ ಪಾವತಿ ಆಯ್ಕೆಗಳನ್ನು ಬಳಸಲು ನಾವು ನಿಮಗೆ ಶಿಫಾರಸು ಮಾಡುತ್ತೇವೆ ಎಂದು paytm ಟ್ವೀಟ್ ಮೂಲಕ ಮಾಹಿತಿ ನೀಡಿದೆ.