ಖಾಸಿಮ್ ಸುಲೇಮನ್ ಯಾರು..? ಅಮೆರಿಕಾದ ಸೇನಾ ಪಡೆ ಈತನನ್ನು ಕೊಂದಿದ್ದು ಯಾಕೆ..?

ಖಾಸಿಮ್ ಸುಲೇಮಾನ್ ಸಾವು ಈಗ ಜಗತ್ತಿನಾದ್ಯಂತ ಮೂರನೇ ಮಹಾಯುದ್ಧದ ಚರ್ಚೆ ಹುಟ್ಟು ಹಾಕಿದೆ. ಹಾಗಾದ್ರೆ ಯಾರು ಈ ಸುಲೇಮಾನ್.. ? ಅಮೆರಿಕಾ ಸೇನಾಪಡೆ ಈತನನ್ನು ಕೊಂದಿದ್ದು ಯಾಕೆ..? ಎನ್ನುವುದರ ಕುರಿತು ಸಂಪೂರ್ಣ ವರದಿ ಈ ಲೇಖನದಲ್ಲಿದೆ.

ಖಾಸಿಮ್ ಸುಲೇಮಾನ್ ಇರಾನ್ ನ ಪ್ರತಿಷ್ಠಿತ ಸೇನಾ ವಿಭಾಗ ಖುದ್ಸ್ ಫೋರ್ಸ್ ನ ಕಮಾಂಡರ್.ಹಾಗೂ ಇರಾನ್ ಅಧ್ಯಕ್ಷ ಖಮೇನಿಗೆ ಅತ್ಯಂತ ಆಪ್ತನಾಗಿದ್ದು,
ಇರಾನ್ ನ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರ 
ನಿರ್ವಹಿಸುತ್ತಿದ್ದ. 

ಅಷ್ಟೇ ಅಲ್ಲದೇ ವಿಶ್ವದಾದ್ಯಂತ ಹರಡಿಕೊಂಡಿರುವ  ಇರಾನ್ ಮೂಲದ ಭಯೋತ್ಪಾದಕ ಸಂಘಟನೆಗಳಿಗೆ ಈತನೇ ನಾಯಕನಾಗಿದ್ದ. ಜರ್ಮನಿ,ಭಾರತ ಹಾಗೂ ಸಿರಿಯಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಹಾಗೂ ರಾಜಕೀಯ ಹತ್ಯೆ ನಡೆಸಿರುವ ಕುಖ್ಯಾತಿ ಸುಲೇಮಾನ್ ಗಿದೆ.

ಈತ ಜನಿಸಿದ್ದು 1957 ರಲ್ಲಿ. ಕಟ್ಟಡ ನಿರ್ಮಾಣದ ಕಾರ್ಮಿಕನಾಗಿದ್ದ ಈತ 1980 ರಲ್ಲಿ ಸೈನ್ಯ ಸೆರುಕೊಂಡನು. ನಂತರ ಅಫಘಾನಿಸ್ತಾನ ಜೊತೆಗೇ ನಡೆದ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮೂಲಕ ಸೇನೆಯಲ್ಲಿ ಉನ್ನತ ಸ್ಥಾನಕ್ಕೇರಿದ.

ಅಮೆರಿಕಾ ಈತನನ್ನು ಕೊಂದಿದ್ದು ಯಾಕೆ..?

ಖಾಸಿಮ್ ಸುಲೇಮಾನ್ ಇರಾಕ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಅಧಿಕಾರಿ  ಹಾಗೂ ಸಿಬ್ಬಂದಿಗಳ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಿದ್ದ ಮತ್ತು ಅಮೆರಿಕಾ ವಿರುದ್ಧ ಉಗ್ರಗಾಮಿ ಚಟುವಟಿಕೆಗಳನ್ನು ಪೊಷಿಸುತ್ತಿದ್ದ.
ಹಾಗಾಗಿ ಆತನನ್ನು ಕೊಲ್ಲುವುದು  ಅನಿವಾರ್ಯವಾಗಿತ್ತು ಎಂದು ಅಮೆರಿಕಾ ತಿಳಿಸಿದೆ.