
ನಟಿ ಸಂಜನಾ ವಿರುದ್ದ ೪ ಕೋಟಿ ಮಾನನಷ್ಟ ಮೊಕದ್ದಮೆ
ಬೆಂಗಳೂರು: ಡಿಸೆಂಬರ್ ೨೪ ರ ರಾತ್ರಿ ಕ್ರಿಸ್ಮಸ್ ಪಾರ್ಟಿಯಲ್ಲಿ ನಟಿ ಸಂಜನಾ ಮತ್ತು ವಂದನಾ ಜಗಳವಾಡಿಕೊಂಡು ಸ್ಟೇಷನ್ ಮೆಟ್ಟಿಲೇರಿದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು ಇದೀಗ ನಟಿ ಸಂಜನಾ ವಿರುದ್ಧ ವಂದನಾ ಜೈನ್ ಬರೋಬ್ಬರಿ ೪ ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸಂಜನಾ ಮತ್ತು ವಂದನಾ ಇಬ್ಬರು ಬಹುದಿನಗಳ ಗೆಳತಿಯರಾಗಿದ್ದರು. ಪಾರ್ಟಿಯೊಂದರಲ್ಲಿ ಮಾತಿಗೆ ಮಾತು ಬೆಳೆದ ಪರಿಣಾಮ ನಟಿ ಸಂಜನಾ ನನ್ನ ಮೇಲೆ ರಾದ್ದಾಂತ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ವಂದನಾ ಆರೋಪಿಸಿ ಹೌಗ್ರೌಂಡ್ ಸ್ಟೇಷನ್ ನಲ್ಲಿ ಧಾವೆ ಹೂಡಿದ್ದರು. ಹಲ್ಲೆ ಮಾಡಿರುವ ವಿಡಿಯೋವನ್ನ ಮಾಧ್ಯಮದರಿಗೆ ವಂದನಾ ನೀಡಿದ್ದಾರೆ.