
ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ..!
ಹಾಸನ: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಕೆ.ಹೊಸಕೊಪ್ಪಲು ಬಳಿ ನಡೆದಿದೆ. ಆಲೂರಿನ ಆಂಜಿಹಳ್ಳಿ ಗ್ರಾಮದ ಚಂದನ್ (25) ಮೃತ ದುರ್ದೈವಿ.
ನಾಲ್ಕು ವರ್ಷಗಳ ಹಿಂದೆ ಯುವಕನೊಬ್ಬನ ಸಾವಿನ ಪ್ರಕರಣದಲ್ಲಿ ಮೃತ ಚಂದನ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಹಳೇ ವೈಷಮ್ಯದಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಗೆಳೆಯ ಫೋನ್ ಮಾಡಿದ್ದಾನೆ ಎಂದು , ಹಾಸನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಚಂದನ್ ಮನೆಯಿಂದ ಹೊರಟಿದ್ದ. ಬಳಿಕ ಈತನನ್ನ ಬೈಕ್ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ದುಷ್ಕರ್ಮಿಗಳು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಸಿಕೊಂಡು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.