
ಬಹು ನಿರೀಕ್ಷಿತ ಚಿತ್ರ ಆದಿಪುರುಷ ಪ್ರಾರಂಭ
ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಆದಿಪುರುಷ ಚಿತ್ರೀಕರಣ ಜನವರಿ 19 ರಂದು ಮೋಶನ್ ಕ್ಯಾಪ್ಟರ್ ಚಿತ್ರೀಕರಣ ಮಾಡುವ ಮೂಲಕ ಆರಂಭಗೊಂಡಿತು.
ಚಿತ್ರದ ನಿರ್ದೇಶಕರಾದ ಓಂ ರಾವತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾದ ಸುದ್ದಿಯನ್ನ ಸಂತಸದಿಂದ ಹಂಚಿಕೊಂಡಿದ್ದಾರೆ, ಚಿತ್ರ ತಂಡದೊಂದಿಗಿನ ಫೋಟೋವನ್ನ ಹಂಚಿಕೊಂಡಿರುವ ರಾವತ್ " ಮೋಶನ್ ಕ್ಯಾಪ್ಟರ್ ಶುರುವಾಗುತ್ತಿದೆ, ಆದಿಪುರುಷನ ಪ್ರಪಂಚವನ್ನ ಸ್ರಷ್ಟಿಸುತ್ತಿದ್ದೇವೆ " ಎಂದು ತಿಳಿಸಿದ್ದಾರೆ .
ಚಿತ್ರದ ಮೊದಲ ಪೋಸ್ಟರ್ ಚಿತ್ರ ರಸಿಕರಲ್ಲಿ ಕುತೂಹಲ ಹೆಚ್ಚಿಸಿದ್ದು ಚಿತ್ರದ ಕುರಿತಾದ ಇನ್ನಷ್ಟು ಹೊಸ ಮಾಹಿತಿಗಾಗಿ ಕಾಯುತ್ತಿದ್ದಾರೆ.
ಸುಮಾರು 400 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರ ಅತ್ಯದ್ಭುತ ದ್ರಶ್ಯ ಚಮತ್ಕಾರದಿಂದ ಕೂಡಿರುತ್ತದೆ ಎಂದು ತಂತ್ರಜ್ಞ ಮಾಗ್ನೆಸ್ ಓಪಸ್ ಭರವಸೆ ನೀಡಿದ್ದಾರೆ, ಇದುವರೆಗೂ ಭಾರತೀಯ ಚಿತ್ರರಂಗದಲ್ಲಿ ಬಳಸದ ತಂತ್ರಜ್ಞಾನ ಇದರಲ್ಲಿ ಬಳಕೆಯಾಗಲಿದ್ದು ಬಹಳಷ್ಟು ವಿ ಎಫ್ ಎಕ್ಸ್ ಒಳಗೊಂಡಿರಲಿದೆ.
ಆದಿಪುರುಷ ಹಿಂದೂ ಮಹಾಕಾವ್ಯ ರಾಮಾಯಣವನ್ನ ಆಧರಿಸಿದ ಪೌರಾಣಿಕ ಚಿತ್ರವಾಗಿದೆ, ಅದರಲ್ಲಿ ಪ್ರಭಾಸ್ ರಾಮನಾಗಿಯೂ, ಸೈಫ್ ಅಲಿ ಖಾನ್ ರಾವಣನಾಗಿಯೂ ತೆರೆಯಮೇಲೆ ಕಾಣಿಸಿಕೊಳ್ಳಲಿದ್ದಾರೆ, ನಾಯಕಿಯರಾಗಿ ದೀಪಿಕಾ ಪಡುಕೋಣೆ ಹಾಗೂ ಕೃತಿ ಶನನ್ ಹೆಸರು ಕೇಳಿಬರುತ್ತಿದೆ.