
ತಲೆಮರೆಸಿಕೊಂಡಿದ್ದ ಆರೋಪಿ ಬಂಧನ!
ಮುಂಡಗೋಡ: ಕಳೆದ 4 ವರ್ಷಗಳಿಂದ ನ್ಯಾಯಲಕ್ಕೆ ಹಾಜರಾಗದೇ ತಲೆ ಮರೆಸಿಕೊಂಡು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನುಸುತ್ತಿದ್ದ ಆರೋಪಿಯನ್ನು ಪಿಎಸ್ಐ ಡಾ.ಶಿವಾನಂದ ಚಲವಾದಿ ಮಾರ್ಗದರ್ಶನದಲ್ಲಿ. ಎಎಸ್‍ಐ ಚವ್ಹಾಣ ಸಿಬ್ಬಂದಿಗಳಾದ ಗುರು ನಾಯಕ್, ಭಗವಾನ ಗಾಂವ್ಕರ, ರಾಘು ಪಠಗಾರ, ವಿನೋಧ ಜಿ.ಬಿ ಅವರ ಸಹಾಯದಿಂದ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂದಿತ ಆರೋಪಿ ಪ್ರದೀಪ ಸಿದ್ದಿ ಎಂದು ತಿಳಿದು ಬಂದಿದೆ ಈತ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ . ಕೋರ್ಟ್‍ನಲ್ಲಿ ಜಾಮೀನು ಪಡೆದ ನಂತರ ಕೋರ್ಟ್‍ಗೆ ಹಾಜರಾಗದೆ ಪೊಲೀಸರು ಬರುವ ಸುದ್ದಿ ತಿಳಿಯುತ್ತಿದ್ದಂತೆ ಪರಾರಿಯಾಗುತ್ತಿದ್ದ . ಈತನ ಮೇಲೆ ಇನ್ನೂ 5 ಗಂಭೀರವಾದ ಆರೋಪಗಳಿವೆ ಎಂದು ಪಿಎಸ ಐ ಹೇಳಿದರು.
ಭಾನುವಾರ ಆರೋಪಿಯ ಖಚಿತ ಮಾಹಿತಿ ಪಡೆದ ಪೊಲೀಸರು ಬಂದಿಸುವಲ್ಲಿಯಶಸ್ವಿಯಾಗಿದ್ದಾರೆ.