
ರೈತರಲ್ಲಿ ಆತಂಕ;ಈರುಳ್ಳಿ ಬೆಲೆ ಕುಸಿತ....
ಈ ಹಿಂದೆ ಚಿನ್ನದಂತೆ ದುಬಾರಿಯಾಗಿದ್ದ ಈರುಳ್ಳಿ ಬೆಲೆ ಇದೀಗ ಭಾರೀ ಕುಸಿತ ಕಂಡಿದೆ.ಕೆಲ ದಿನಗಳ ಹಿಂದೆ ಇದೇ ಈರುಳ್ಳಿ ದಾಖಲೆ ಪ್ರಮಾಣದಲ್ಲಿ ಬೆಲೆ ಏರಿಕೆ ಕಂಡಿತ್ತು. ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು.
ಆದರೆ ಇದೀಗ ಈರುಳ್ಳಿ, ಬೆಳ್ಳುಳ್ಳಿ ಮತ್ತು ತರಕಾರಿ ಬೆಲೆ ಗಣನೀಯವಾಗಿ ಕುಸಿದಿದೆ.ಈ ಹಿಂದೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿ ಗೆ 100ರೂ ತನಕ ಏರಿಕೆಯಾಗಿದ್ದು,ಇದೀಗ 10-12 ರೂ ಗೆ ಇಳಿದಿದೆ.
ತರಕಾರಿ ಬೆಲೆ ಇಳಿಕೆ ಗ್ರಹಕರಲ್ಲಿ ಸಂತಸವನ್ನು ತರಿಸಿದೆ.ಆದರೆ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.ಈಗಾಗಲೇ ಹೊಸ ಬೆಳೆ ಬಂದ್ದಿದು,ಉತ್ತಮ ಇಳುವರಿಯೂ ಇದೆ.ಮಾರುಕಟ್ಟೆಗೆ ಸೊಪ್ಪು ಸೇರಿದಂತೆ ವಿವಿಧ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿರುವುದರಿಂದ ಬೇಡಿಕೆ ಕಡಿಮೆಯಾಗಿದೆ.