
ಇಹಲೋಕದ ಯಾತ್ರೆ ಮುಗಿಸಿದ ಕನ್ನಡದ ಖ್ಯಾತ ನಿರೂಪಕ ಗಜಾನನ ಹೆಗಡೆ
ಬೆಂಗಳೂರು : ಕನ್ನಡ ಮಾಧ್ಯಮ ಲೋಕದ ಖ್ಯಾತ ನಿರೂಪಕ ಗಜಾನನ ಹೆಗಡೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
ಈ ಟಿವಿ, ಕಸ್ತೂರಿ ಟಿವಿ ಹಾಗೂ ಪ್ರಜಾ ಟಿವಿ ಸೇರಿದಂತೆ ಹಲವು ಪ್ರಮುಖ ವಾಹಿನಿಗಳಲ್ಲಿ ಗಜಾನನ ಹೆಗಡೆ ಸುದ್ದಿ ವಾಚಕರಾಗಿ ಕಾರ್ಯನಿರ್ವಹಿಸಿದ್ದರು. ಕೆಲ ಕಾಲದಿಂದ ಅಸ್ವಸ್ಥತೆಯಿಂದ ಬಳಲುತಿದ್ದ ಇವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮಂಗಳವಾರ ನಿಧನರಾಗಿದ್ದಾರೆ.
ಇನ್ನು ಗಜಾನನ ಹೆಗಡೆ ನಿಧನಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದು , ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.