
ವಿದ್ಯಾರ್ಥಿ ನಿಲಯ ಕಟ್ಟಡಗಳ ಶಂಕು ಸ್ಥಾಪನೆ ನೆರವೇರಿಸಿದ ಉಪಮುಖ್ಯಮಂತ್ರಿ ಎಮ್. ಗೋವಿಂದ ಕಾರಜೋಳ.....
ತಾವರಗೇರಾ ಪಟ್ಟಣ ಪಂಚಾಯಿತಿ ಒಳಪಡುವ ಗ್ರಾಮ ಪಂಚಾಯಿತಿ ಮೆಣೆದಾಳಲ್ಲಿ ನಡೆದ ಶ್ರೀ ಮುರಾರ್ಜಿ ದೇಸಾಯಿ ವಸತಿ ಶಾಲೆ (ಪ.ಜಾ) ಮೆಣೆದಾಳ, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ತಾವರಗೇರಾ (ಪ.ಜಾ), ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ (ಪ.ಪಂ), ಕುಷ್ಟಗಿ ಕಟ್ಟಡಗಳ ಶಂಕು ಸ್ಥಾಪನೆ ಸಮಾರಂಭಕ್ಕೆ ಆಗಮಿಸಿದ ಶ್ರೀ ಗೋವಿಂದ ಎಮ್ ಕಾರಜೋಳ,ಮಾನ್ಯ ಉಪ ಮುಖ್ಯ ಮಂತ್ರಿಗಳು, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ಸರಕಾರ, ಶಂಕುಸ್ಥಾಪನೆ ನೆರವೇರಿಸಿ ಮಾತಾನಾಡುತ್ತಾ ವಿದ್ಯಾರ್ಥಿಗಳಿಗೆ ವಸತಿ ನಿಲಯ ಮತ್ತು ಪ್ರೊತ್ಸಾಹ ಧನವನ್ನು ಕೊಡಲಾಗುತ್ತದೆ. 2008-2013 ಸಾಲಿನಲ್ಲಿ ನಮ್ಮ ಸರ್ಕಾರವು ಬಿ.ಎಸ್.ಯಡಿಯುರಪ್ಪ ನೆತೃತ್ವದಲ್ಲಿ 116 ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಇತಿಹಾಸವಾಯಿತು. ಹಾಗೂ ಕೇಂದ್ರ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷ ಬಡ ಹೆಣ್ಣು ಮಕ್ಕಳಿಗೆ ವಸತಿ ಪದವಿ ಕಾಲೇಜು 20 ಎಕರೆ ಜಮೀನಿನಲ್ಲಿ 650 ಮಕ್ಕಳಿಗೆ ಕಟ್ಟಡ ಸಂಕೀರ್ಣಕ್ಕೆ ಕೆಂದ್ರ ಸರ್ಕಾರ 40 ಕೋಟಿ ಹಾಗೂ ರಾಜ್ಯ ಸರ್ಕಾರದ 10 ಕೋಟಿ ಜಂಟಿಯಾಗಿ ನಿರ್ಮಾಣ ಮಾಡಲಾಗುತ್ತಿದೆ.
160 ವಸತಿ ನಿಲಯಕ್ಕೆ 500 ಕೋಟಿಯನ್ನು ಕೇಂದ್ರ ಸಚಿವರು ತಾವರ್ಚಂದ್ ಗೊಟುರ್ ನೀಡುತ್ತಾರೆ ಹಾಗೂ ತಾಲೂಕು ಸ್ಥಳೀಯ ವಸತಿ ನಿಲಯದಲ್ಲಿ ಶೇಕಡಾ 25 ರಷ್ಟು ಮೀಸಲಾತಿ ನೀಡುವುದರ ಮೂಲಕ ಸ್ಥಳೀಯ ವಿಧ್ಯಾರ್ಥಿಗಳಿಗೆ ಮೀಸಲಾತಿ ನೀಡಲಾಗಿದೆ ಹಾಗೂ 30445 ಕೋಟಿ ಶಿಕ್ಷಣ ಕ್ಷೇತ್ರ, ಭೂಮಿ ಖರೀದಿ, ಕೌಶಲ್ಯ ಅಭಿವೃದ್ಧಿ, ರೈತರಿಗೆ ಹಾಗೂ ದಲಿತರಿಗೆ ಹಾಗೂ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ಕೊಡಲಾಗುತ್ತದೆ. ಹಾಗೂ ಕರಡಿ ಸಂಗಣ್ಣ ಸಂಸದರು ಮಾತಾಡುತ್ತಾ ಮಕ್ಕಳಿಗೆ ಜ್ಞಾನ ದೇಗುಲ ಶಿಕ್ಷಣ ಕೊಡುವ ಮೂಲಕ ಬಡ ಹೆಣ್ಣು ಮಕ್ಕಳ ಓಬಿಸಿ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ವರ್ಗಕ್ಕೆ ಆದ್ಯತೆ ಕೊಡಲಾಗುತ್ತದೆ.
ಇದೇ ಶಾಸಕರಾದ ಅಮರೆಗೌಡ ಬಯ್ಯಾಪುರ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಮಾತಾಡುತ್ತಾ ಬಡ ವಿದ್ಯಾರ್ಥಿ ಮಕ್ಕಳು ಶ್ರೀಮಂತ ಮಕ್ಕಳಿಗಿಂತ ವಿದ್ಯಾಭ್ಯಾಸದಲ್ಲಿ ಮುಂದುವರೆದಿದ್ದು ಬಡ ಮಕ್ಕಳ ಕಲ್ಯಾಣಕ್ಕಾಗಿ ವಿವಿಧ ರೀತಿಯ ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತದೆ ಎಂದರು.
ವರದಿ: ಶರಣಪ್ಪ ಕುಂಬಾರ ತಾವರಗೇರಾ.