1.jpeg)
ಜಮೀರ್ ಅಹಮದ್ ಪೊಲೀಸ್ ವಶ...….!
ಬಳ್ಳಾರಿ: ಶಾಸಕ ಸೋಮಶೇಖರ ರೆಡ್ಡಿ ಮನೆ ಮುಂದೆ ಪ್ರತಿಭಟನೆ ನಡೆಸಲು ಬಳ್ಳಾರಿ ನಗರ ಪ್ರವೇಶ ಮಾಡುತ್ತಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಅವರನ್ನು ನಗರದ ಹೊರವಲಯದಲ್ಲಿ ಸೋಮವಾರ ಪೊಲೀಸರು ವಶಕ್ಕೆ ಪಡೆದರು.ಪೊಲೀಸ್ ವಾಹನದಲ್ಲಿ ಕುಡಿತಿನಿ ಪೊಲೀಸ್ ಸ್ಟೇಷನ್ಗೆ ಕರೆದೊಯ್ದರು.
ಮುಂಜಾಗ್ರತಾ ಕ್ರಮವಾಗಿ ಶಾಸಕ ಸೋಮಶೇಖರ್ ರೆಡ್ಡಿ ಮನೆಗೆ ಬೀಗಿ ಭದ್ರತೆ ಕೈಗೊಳ್ಳಲಾಗಿತ್ತು. ಸ್ಥಳೀಯ ಪೊಲೀಸರು ಸೇರಿ ಒಂದು ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ನಗರದ ಎಂಜಿನಿಯರಿಂಗ್ ಕಾಲೇಜು, ಸುಧಾ ಕ್ರಾಸ್ ಬಳಿ ಮಾಡಲಾಗಿತ್ತು. ಜಮ್ಮೀರ್ ಅಹಮದ್ ಬಳ್ಳಾರಿಗೆ ಬರೋದನ್ನ ಬಿಜೆಪಿ ನಾಯಕರು ಸೇರಿದಂತೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.