.jpeg)
ಪೌರತ್ವ ಕಾಯ್ದೆ ವಿರೊಧಿಸಬಹುದು ಅದರೆ ಜಾರಿ ಮಾಡದಿರಲು ಸಾಧ್ಯವಿಲ್ಲ : ಕಪಿಲ್ ಸಿಬಲ್.
ಕೇರಳ : ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯನ್ನು ಹಲವು ರಾಜ್ಯಗಳು ಜಾರಿಯಾದ ದಿನದಿಂದ ವಿರೋಧಿಸಿಕೊಂಡು ಬಂದಿವೆ. ಅದರಲ್ಲೂ ಪಶ್ಚಿಮ ಬಂಗಾಳ, ಕೇರಳ ಮತ್ತಿತರ ರಾಜ್ಯಗಳ ಮುಖ್ಯ ಮಂತ್ರಿಗಳು ಒಂದೂ ಹೆಜ್ಜೆ ಮುಂದೆ ಹೋಗಿ , ಕಾಯ್ದೆಯನ್ನು ತಮ್ಮ ರಾಜ್ಯಗಳಲ್ಲಿ ಜಾರಿ ಮಾಡುವುದಿಲ್ಲ ಎಂದು ಹೇಳಿದ್ದರು.
ಇನ್ನು ಕಾಂಗ್ರೆಸ್ ಸಹ ಮೊದಲಿನಿಂದಲೂ ಪೌರತ್ವ ಕಾಯ್ದೆ ವಿರುದ್ಧ ಹೊರಾಟ ಮಾಡುತ್ತಲೇ ಬಂದಿದೆ.ಆದರೆ ಈಗ ಕಾಂಗ್ರೆಸ್ ಪ್ರಮುಖ ನಾಯಕರೊಬ್ಬರು, ರಾಜ್ಯಗಳಿಗೆ ಸಿಎಎ ಅನುಷ್ಠಾನ ನಿರಾಕರಿಸುವ ಹಕ್ಕಿಲ್ಲ ಎಂದು ಹೇಳಿದ್ದಾರೆ.
ಕೇರಳದ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಕಾಂಗ್ರೆಸ್ ನ ಹಿರಿಯ ನಾಯಕ ಕಪಿಲ್ ಸಿಬಲ್ , ಪೌರತ್ವ ಕಾಯ್ದೆ ಈಗಾಗಲೇ ಸಂಸತ್ ನಲ್ಲಿ ಅಂಗಿಕಾರ ಪಡೆದಿದ್ದು, ರಾಜ್ಯ ಸರ್ಕಾರಗಳು ಕಾಯ್ದೆ ಜಾರಿ ಮಾಡದೇ ಇರಲು ಸಾಧ್ಯವಿಲ್ಲ. ನಿವು ಕಾಯ್ದೆಯನ್ನು ವೀರೊಧಿಸಬಹುದು. ವಿಧಾನಸಭೆಗಳಲ್ಲಿ ಕಾಯ್ದೆ ವಿರುದ್ಧ ನಿರ್ಣಯ ಕೈಗೊಳ್ಳಬಹುದು. ಅದರೆ ಕಾಯ್ದೆಯ ಅನುಷ್ಠಾನ ನಿರಾಕರಿಸುವುದು ಅಸಂವಿಧಾನಿಕ ಆಗುತ್ತದೆ ಎಂದರು.